ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೃಂಗೇರಿ | ಮುಂದುವರಿದ ಮಳೆ: ತೋಟಗಳಲ್ಲಿ ಉಲ್ಬಣಿಸಿದ ಕೊಳೆರೋಗ

ಮುಂದುವರಿದ ಮಳೆ: ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಾರರು ತತ್ತರ
Published : 3 ಸೆಪ್ಟೆಂಬರ್ 2024, 6:21 IST
Last Updated : 3 ಸೆಪ್ಟೆಂಬರ್ 2024, 6:21 IST
ಫಾಲೋ ಮಾಡಿ
Comments

ಶೃಂಗೇರಿ: ತಾಲ್ಲೂಕಿನಲ್ಲಿ ಮಳೆ ಮುಂದುವರಿದಿರುವುದರಿಂದ ಅಡಿಕೆ, ಕಾಫಿ ಮತ್ತು ಕಾಳುಮೆಣಸಿನ ಬೆಳೆಗೆ ಕಾಣಿಸಿಕೊಂಡಿರುವ ಕೊಳೆರೋಗ ನಿಯಂತ್ರಣಕ್ಕೆ ಬರುತ್ತಿಲ್ಲ.

ಶೃಂಗೇರಿಯಲ್ಲಿ ಬಾರಿ ಜನವರಿಯಿಂದ– ಆಗಸ್ಟ್‌ ಅಂತ್ಯದವರೆಗೆ 364 ಸೆಂ.ಮೀ,  ಕಿಗ್ಗಾದಲ್ಲಿ 510 ಸೆಂ.ಮೀ ಮತ್ತು ಕೆರೆಕಟ್ಟೆಯಲ್ಲಿ 620 ಸೆಂ.ಮೀ ಮಳೆಯಾಗಿದೆ. ಜೂನ್‍ನಿಂದ ಆಗಸ್ಟ್‌ವರೆಗೆ ಬೆಳೆಗಾರರು  3 ಸುತ್ತಿನ ಬೋರ್ಡೊ ದ್ರಾವಣ ಸಿಂಪಡಿಸಿದ್ದಾರೆ.  ಈಗ ಮತ್ತೆ ಮಳೆ ಮುಂದುವರಿದಿರುವುದರಿಂದ ಬೆಳೆ ಹಾನಿಯ ಆತಂಕದಲ್ಲಿದ್ದಾರೆ. ಶೇ.80ರಷ್ಟು ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಕೆಲವು ತೋಟಗಳಲ್ಲಿ ಅಡಿಕೆ ಕಾಯಿ ಹಣ್ಣಾಗಿ ಉದುರಲು ಪ್ರಾರಂಭವಾಗಿದೆ.

ತಾಲ್ಲೂಕಿನಲ್ಲಿ ಶೇ 75ರಷ್ಟು ರೈತರ ತೊಟಗಳಲ್ಲಿ  ಕಾಫಿ ಕಾಯಿಗಳು ನೆಲಕ್ಕುರುಳಿವೆ.  ತೇವಾಂಶ ಹೆಚ್ಚಳದಿಂದ ಕಾಳು ಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಪಣಿಯೂರು, ಕರಿಮುಂಡ ಮುಂತಾದ ತಳಿಯ ಕಾಳುಮೆಣಸಿನ ಗರೆ ಉದುರುತ್ತಿದ್ದು, ಈ ಬಾರಿ ಉತ್ತಮ ಫಸಲು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಬೆಳೆಗಾರರು. 

ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕಾಳುಮೆಣಸಿಗೆ ಬರುವ ಕೊಳೆರೋಗ ಎಲೆಚುಕ್ಕಿರೋಗ ಸೊರಗು ರೋಗಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.
ಗುಣಿತಲು ದಿನೇಶ್, ಕೃಷಿಕ
ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದು ಕೆಲವು ತೋಟಗಳಲ್ಲಿ ಅಡಿಕೆ ಎಲೆ ಚುಕ್ಕಿ ರೋಗ ಉಲ್ಬಣಿಸಿದೆ. ಮಳೆ ಬಿಡುವು ನೀಡಿದಾಗ ಬೋರ್ಡೊ ದ್ರಾವಣ ಸಿಂಪಡಣೆ ಮಾಡಬೇಕು.
ಶ್ರೀಕೃಷ್ಣ, ತೋಟಗಾರಿಕಾ ಇಲಾಖೆಯ ಸಹಾಯಕ ನೀರ್ದೆಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT