ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ವಿವಿಧೆಡೆ ಮುಳುಗಡೆ; ಸಂಚಾರಕ್ಕೆ ಅಡ್ಡಿ

ಚಾರ್ಮಾಡಿಯಲ್ಲಿ ರಸ್ತೆಗೆ ಬಿದ್ದ ಮರ, ಶೃಂಗೇರಿಯಲ್ಲಿ ತುಂಬಿ ಹರಿದ ತುಂಗಾ ನದಿ
Last Updated 11 ಜುಲೈ 2022, 3:01 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಸುತ್ತಮುತ್ತ ಕೆಲವು ಕಡೆ ನೀರಿನಿಂದ ಆವೃತಗೊಂಡಿದೆ.

ಕುರಬಗೇರಿ, ಭಾರತೀತೀರ್ಥ ರಸ್ತೆ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಆಗುಂಬೆ ಘಾಟಿಯಲ್ಲಿ ಧರೆ ಕುಸಿದ ಪರಿಣಾಮ ಶೃಂಗೇರಿಯಿಂದ ಉಡುಪಿ ಸಂಪರ್ಕದ ರಸ್ತೆಯ ಸಂಚಾರ ಸ್ಥಗಿತಗೊಂಡಿದೆ. ಹಳ್ಳಕೊಳ್ಳಗಳು, ಭತ್ತದ ಗದ್ದೆಗಳು, ತೋಟಗಳು ನೀರಿನಿಂದ ಆವೃತಗೊಂಡಿವೆ. ತುಂಗಾನದಿ ಉಕ್ಕಿ ಹರಿದು ಕಪ್ಪೆ ಶಂಕರವು ನೀರಿನಿಂದ ಆವೃತವಾಗಿದೆ.

ಗಾಂಧಿಮೈದಾನ ಅಂಗಡಿ ಹಾಗೂ ಜನರನ್ನು ಸ್ಥಳಾಂತರಿಸಲಾಗಿದೆ. ತಾಲ್ಲೂಕಿನಲ್ಲಿ ಬೇಗಾರಿನ ಆಂಪೆಯಲ್ಲಿ 1 ಕಂಬ, ಗೋಳುಗೋಡುನಲ್ಲಿ 1 ವಿದ್ಯುತ್ ಕಂಬ ಧರೆಗೆ ಉರುಳಿದೆ.
ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಗ್ರಾಮಗಳು ಪಟ್ಟಣ
ದಿಂದ 25 ರಿಂದ 30 ಕಿ.ಮೀ. ದೂರವಿದ್ದು ಅಸ್ಪತ್ರೆಗೆ ಬರಲು ಜನರು ಹರಸಾಹಸ ಪಡಬೇಕಿದೆ. ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದ್ದು ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪರ ವಹಿವಾಟು ಕಡಿಮೆ ಆಗಿದೆ.
ತಹಶೀಲ್ದಾರ್ ಗೌರಮ್ಮ, ಪೊಲೀಸ್ ಇನ್‍ಸ್ಪೆಕ್ಟರ್ ರವಿ ಬಿ.ಎಸ್, ಅಗ್ನಿ ಶಾಮಕ ಸಿಬ್ಬಂದಿ ಕ್ರಮ ವಹಿಸಿದ್ದಾರೆ.

ಭಾರಿ ಮಳೆ

ನರಸಿಂಹರಾಜಪುರ: ಶನಿವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾನುವಾರ ಭಾರಿ ಪ್ರಮಾಣದಲ್ಲಿ ಸುರಿಯಿತು.

ಹಳ್ಳ, ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಭದ್ರಾ ಹಿನ್ನೀರಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಿದೆ. ತಾಲ್ಲೂಕಿನ ಮೆಣಸೂರು ಗ್ರಾಮದ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ.

ಅಡಿಕೆ ಉದುರಲು ಪ್ರಾರಂಭವಾಗಿದ್ದು, ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಭಾರಿ ಮಳೆಗೆ ಕಾನೂರು, ಕಟ್ಟಿನಮನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸು ಕುದುರೆಗುಂಡಿಯ ಹಳ್ಳ ಉಕ್ಕಿ ಹರಿದ ಪರಿಣಾಮ ಸಂಪರ್ಕ ಕಡಿತಗೊಂಡಿತ್ತು. ನರಸಿಂಹರಾಜಪುರದ ವ್ಯಾಪ್ತಿಯಲ್ಲಿ ಶನಿವಾರದಿಂದ ಭಾನುವಾರ ಬೆಳಿಗ್ಗೆ ವರೆಗೆ 31.2ಮಿ.ಮೀ ಮಳೆಯಾಗಿದೆ.

ತಾಲ್ಲೂಕಿನ ಕಾನೂರು, ಕಟ್ಟಿನಮನೆ ಗ್ರಾಮಕ್ಕೆ ಹೋಗುವ ಮಾರ್ಗದ ಕುದುರೆಗುಂಡಿ ಸಮೀಪ ಹರಿಯುವ ಹಳ್ಳ ಉಕ್ಕಿ ಹರಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT