ಜ್ವರ; 12 ಮಂದಿ ರಕ್ತ ಪರೀಕ್ಷೆಗೆ ರವಾನೆ

ಮಂಗಳವಾರ, ಜೂನ್ 18, 2019
28 °C
ಇಂದಾವರ ಗ್ರಾಮದಲ್ಲಿ ಆರೋಗ್ಯ ಶಿಬಿರ

ಜ್ವರ; 12 ಮಂದಿ ರಕ್ತ ಪರೀಕ್ಷೆಗೆ ರವಾನೆ

Published:
Updated:
Prajavani

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿರುವುದರಿಂದ ಸೋಮವಾರ ಆರೋಗ್ಯ ಶಿಬಿರ ಆಯೋಜಿಸಿ ತಪಾಸಣೆ ಮಾಡಲಾಯಿತು.

ಶಿಬಿರದಲ್ಲಿ 135 ಮಂದಿ ತಪಾಸಣೆ ಮಾಡಲಾಗಿದೆ. ನಾಲ್ವರು ವೈದ್ಯರು, ಆಶಾಕಾರ್ಯಕರ್ತೆಯರು ಸಹಿತ 25 ಆರೋಗ್ಯ ಸಿಬ್ಬಂದಿ ಇದ್ದರು. ರಕ್ತದೊತ್ತಡ, ಮಧುಮೇಹ ಸಹಿತ ಸಾಮಾನ್ಯ ತಪಾಸಣೆ ಮಾಡಿದರು.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರವರೆಗೆ ತಪಾಸಣೆ ನಡೆಸಿದರು. ರೋಗಿಗಳಿಗೆ ಔಷಧಗಳನ್ನು ವಿತರಿಸಿದರು.

ಶುಚಿತ್ವ ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು. ಸೊಳ್ಳೆ, ನೋಣಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

‘ಜ್ವರ ಇದ್ದ 9 ಮಂದಿ ರಕ್ತ ಲೇಪನ, ಮೂವರ ರಕ್ತ ಮಾದರಿ ಒಟ್ಟು 12 ಮಂದಿ ರಕ್ತ ಸಂಗ್ರಹಿಸಲಾಗಿದೆ. ರಕ್ತವನ್ನು ಪರೀಕ್ಷೆಗೆ ಜಿಲ್ಲಾ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಆರೋಗ್ಯ ಸಹಾಯಕ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮದಲ್ಲಿ ದುರ್ನಾತ, ನೋಣ, ಸೊಳ್ಳೆಗಳ ಕಾಟ ವಿಪರೀತ ಇದೆ. ಹಲವರು ಜ್ವರ, ತಲೆಭಾರ, ಮೈಕೈ ನೋವು, ಸುಸ್ತು ಬಳಲುತ್ತಿದ್ದಾರೆ. ಗ್ರಾಮದ ಸಮೀಪದ ಕಸ ಘಟಕವೇ ಇದಕ್ಕೆಲ್ಲ ಕಾರಣ. ಸಂಬಂಧಪಟ್ಟವರು ಕಸ ಘಟಕ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು’ ಎಂದು ಗ್ರಾಮದ ಮಂಜುನಾಥ್‌ ಒತ್ತಾಯಿಸಿದರು.

‘ಗ್ರಾಮದಲ್ಲಿ ಪರಿಶೀಲನೆ ಮಾಡಿದ್ದೇವೆ. ಜನರಿಗೆ ಆರೋಗ್ಯ ಮಾಹಿತಿ ನೀಡಿದ್ದೇವೆ. ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸುವಂತೆ ಸಲಹೆ ನೀಡಿದ್ದೇವೆ. ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಸೀಮಾ ತಿಳಿಸಿದರು.

‘ದುರ್ನಾತ ತಪ್ಪಿಸಲು, ಸೊಳ್ಳೆ, ನೋಣಗಳ ನಿಯಂತ್ರಣಕ್ಕೆ ಆದ್ಯ ಗಮನ ಹರಿಸಬೇಕು. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.

‘ಜ್ವರ ಇದ್ದವರ ರಕ್ತ ಮಾದರಿ ಸಂಗ್ರಹಿಸಲಾಗಿದೆ. ರಕ್ತ ಪರೀಕ್ಷೆ ನಂತರ ವೈರಲ್‌ ಜ್ವರವೋ, ಡೆಂಗಿ ಜ್ವರವೋ, ಮಲೇರಿಯಾ, ಚಿಕುನ್‌ ಗುನ್ಯಾವೋ ಎಂಬುದು ಗೊತ್ತಾಗಲಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !