ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ಕೆ.ಮೇಗಲ್: ನನಸಾಗುತ್ತಿದೆ ಕೊಳಮಗೆ ಸೇತುವೆ ಕನಸು

Published 22 ಮೇ 2024, 7:03 IST
Last Updated 22 ಮೇ 2024, 7:03 IST
ಅಕ್ಷರ ಗಾತ್ರ

ಕಳಸ: ಸಂಸೆ ಗ್ರಾ.ಪಂ. ವ್ಯಾಪ್ತಿಯ ಎಸ್.ಕೆ.ಮೇಗಲ್ ಗ್ರಾಮಕ್ಕೆ ಕಳಸದಿಂದ ಸಂಪರ್ಕ ಕಲ್ಪಿಸಲು ಕೊಳಮಗೆಯಲ್ಲಿ ಸೇತುವೆ ಕಾಮಗಾರಿ ಆರಂಭವಾಗಿದ್ದು ಗ್ರಾಮಸ್ಥರಲ್ಲಿ ಹರ್ಷ ಉಂಟಾಗಿದೆ.

ಕಳಸದಿಂದ 4 ಕಿ.ಮೀ ದೂರದ ಕೊಳಮಗೆಯಲ್ಲಿ ಭದ್ರಾ ನದಿಗೆ ಅಡ್ಡಲಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸೇತುವೆ ನಿರ್ಮಾಣ ಆರಂಭವಾಗಿದೆ. ₹6.5 ಕೋಟಿ ವೆಚ್ಚದ ಈ ಸೇತುವೆಯು ಕಳಸದಿಂದ ಎಸ್.ಕೆ.ಮೇಗಲ್, ಕೊಣೆಗೋಡು, ಕಟ್ನೆಪಾಲ್, ವಾಟೆಹಳ್ಳ ಗಿರಿಜನ ಕಾಲೊನಿ, ಎಸ್.ಕೆ.ಮೇಗಲ್ ಹರಿಜನ ಕಾಲೊನಿ, ಹಂದಿಗೋಡು, ಬಿಳಲ್‍ಗೋಡು ಪ್ರದೇಶಕ್ಕೆ ಸನಿಹದ ಸಂಪರ್ಕ ಒದಗಿಸಲಿದೆ.

ಈವರೆಗೆ ಗ್ರಾಮಸ್ಥರು ಕಾರಗದ್ದೆ, ನೂಜಿ ಮೂಲಕ 12ಕಿ.ಮೀ ಸುತ್ತಿ ಬಳಸಿ ಹೋಗಬೇಕಿತ್ತು. ಕೊಳಮಗೆ ಸೇತುವೆ ನಿರ್ಮಾಣದ ನಂತರ ಈ ದೂರ 5 ರಿಂದ 6 ಕಿ.ಮೀ ಆಗಲಿದೆ ಎಂದು ಗ್ರಾಮಸ್ಥ ವಸುಪಾಲ್ ಸಂತಸ ಹೊರಹಾಕಿದ್ದಾರೆ.

200 ಮನೆಗಳ 1,000 ಸಾವಿರಕ್ಕೂ ಹೆಚ್ಚು ಜನರಿಗೆ ಸೇತುವೆಯಿಂದ ಅನುಕೂಲವಾಗಲಿದೆ. ಸೇತುವೆ ನಿರ್ಮಾಣದ ನಂತರ ಗ್ರಾಮಗಳ ಅಭಿವೃದ್ಧಿ ಆಗಲಿದ್ದು, ಪ್ರವಾಸೋದ್ಯಮಕ್ಕೂ ಅನುಕೂಲ ಆಗಬಹುದು ಎಂದು ಬಿಳಲ್‍ಗೋಡು ರಾಜೇಶ್ ಹೇಳುತ್ತಾರೆ.

ಕಳಸದಿಂದ ನೂಜಿ ಮುಖಾಂತರ ಮನೆಗೆ ಹೋಗಲು ಕನಿಷ್ಠ 40ನಿಮಿಷ ಬೇಕಿತ್ತು. ಆದರೆ, ಕೊಳಮಗೆ ಸೇತುವೆ ನಿರ್ಮಾಣದಿಂದ 15 ನಿಮಿಷದಲ್ಲೇ ಮನೆ ಸೇರಬಹುದು. ಮಳೆಗಾಲದಲ್ಲಿ ಗೊಬ್ಬರ, ಔಷಧಿ ತರಲು, ಕೃಷಿ ಉತ್ಪನ್ನ ಸಾಗಿಸಲು ಈ ಸೇತುವೆಯಿಂದ ಉಪಯೋಗವಾಗುತ್ತದೆ ಎಂದು ಕೃಷಿಕ ಪ್ರಮತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಸೇತುವೆಗಾಗಿ ಜನರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದರು. ಸೇತುವೆ ಬೇಡಿಕೆ ಬಗ್ಗೆ ‘ಪ್ರಜಾವಾಣಿ’ ಹಲವು ಬಾರಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT