ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಧಿಕೃತ ಹೋಂಸ್ಟೇ: ಬೀಗ ಹಾಕುವ ಎಚ್ಚರಿಕೆ

ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ತಂಡ ದಿಢೀರ್ ಭೇಟಿ ಪರಿಶೀಲನೆ
Published 20 ಮಾರ್ಚ್ 2024, 16:23 IST
Last Updated 20 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಅತ್ತಿಗುಂಡಿ ಸುತ್ತಮುತ್ತ ಹೋಟೆಲ್ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಜಿಲ್ಲಾಧಿಕಾರಿ ಮೀನಾನಾಗರಾಜ್‌, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ಸೇರಿ ಅಧಿಕಾರಿಗಳ ತಂಡ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತ್ತಿಗುಂಡಿಯಲ್ಲಿನ ಹೊಯ್ಸಳ ಹೋಂಸ್ಟೇಗೆ ಭೇಟಿ ನೀಡಿ ಪರಿಶೀಲಿಸಿದಾಗ ಅನಧಿಕೃತವಾಗಿರುವುದು ಕಂಡು ಬಂತು. ಕೂಡಲೇ ಆ ಹೋಂಸ್ಟೇಗೆ ಬೀಗ ಹಾಕಲಾಯಿತು. ಹಾಲಿಡೇ ಹೋಂ ರೆಸಾರ್ಟ್‌ನಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲದ ಟೆಂಟ್‌ಗಳನ್ನು ನಿರ್ಮಿಸಿದ್ದು, ಇವುಗಳನ್ನು ತೆರವುಗೊಳಿಸಬೇಕು. ಸೂಕ್ತ ಕಟ್ಟಡ ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಿದರು.

ಸ್ಟ್ಯಾನ್ಲಿ ಹೋಂಸ್ಟೇ ಹಾಗೂ ಗ್ರೀನ್ ವುಡ್ ರೆಸಾರ್ಟ್‌ಗಳಲ್ಲಿ ಬಿಲ್ ಬುಕ್ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಕಸದ ಸಮರ್ಪಕ ವಿಲೇವಾರಿ ಕುರಿತು ಸೂಚನೆ ನೀಡಿದರು. ಇಲಾಖೆಯಿಂದ ಅನುಮತಿ ಪಡೆಯದೆ ರೆಸಾರ್ಟ್ ಹೋಂಸ್ಟೇಗಳಿಗೆ ಸಂಬಂಧಿತ ಅನಧೀಕೃತ ನಾಮಫಲಕಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳ ತಂಡ ತೆರವುಗೊಳಿಸಿತು. ಗಿರಿಭಾಗದಲ್ಲಿ ಉಳಿದವುಗಳನ್ನು ಗುರುತಿಸಿ ತುರ್ತಾಗಿ ತೆರವುಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.

ಕೆಲವು ಅಂಗಡಿಗಳ ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದ್ದು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಬಳಸದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಪ್ರವಾಸೋಧ್ಯಮ ಇಲಾಖೆಯಿಂದ ಅನುಮೋದನೆ ಪಡೆಯದೆ ನಿರ್ಮಿಸಿವರುವ ಹೋಟೆಲ್, ಹೋಂಸ್ಟೇ, ರೆಸಾರ್ಟ್‌ಗಳು ಅನುಮತಿ ಪಡೆದುಕೊಳ್ಳಬೇಕು. ನಿಯಮಬಾಹಿರವಾಗಿ ಇರುವುದು ಕಂಡು ಬಂದಲ್ಲಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT