ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NR ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ಬಿಸಿಎ ಕೋರ್ಸ್ ಆರಂಭ

Published 2 ಮೇ 2024, 5:23 IST
Last Updated 2 ಮೇ 2024, 5:23 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಸ್ತುತ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ 1985ರ ದಶಕದಲ್ಲಿ ಪ್ರಾರಂಭವಾದ ಈ ಕಾಲೇಜು 1998ರ ನಂತರ ಸ್ವಂತ ಕಟ್ಟಡ ಹೊಂದಿದೆ. ಆರಂಭದಲ್ಲಿ ಬಿ.ಎ ಪದವಿ ವಿಭಾಗ ಮಾತ್ರ ಇತ್ತು. ಪ್ರಸ್ತುತ ಬಿ.ಎ, ಬಿ.ಕಾಂ. ಬಿಬಿಎ, ಬಿಎಸ್‌ಡಬ್ಲ್ಯು, ಬಿ.ಸಿ.ಎ, ಬಿ.ಬಿ.ಎ (ಪ್ರವಾಸೋದ್ಯಮ), ಎಂ.ಕಾಂ (ಸ್ನಾತಕೋತ್ತರ) ವಿಭಾಗಗಳನ್ನು ಹೊಂದಿದೆ. 10 ಎಕರೆ ಕಾಲೇಜು ಆವರಣ, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಸೌಲಭ್ಯ, ಐ.ಸಿ.ಟಿ ಸೌಲಭ್ಯವಿರುವ ತರಗತಿಗಳು, ಅನುಭವಿ ಅಧ್ಯಾಪಕ ವೃಂದ, ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್ ವಿತರಣೆ, ಮಧ್ಯಾಹ್ನದ ಬಿಸಿಯೂಟ ಸೌಲಭ್ಯವೂ ಇದೆ. ಕ್ರೀಡಾಂಗಣ ಇದೆ.

ವಿದ್ಯಾರ್ಥಿನಿಯರಿಗೆ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಸೌಲಭ್ಯವಿದೆ.

ಕಾಲೇಜಿನಲ್ಲಿ 13 ಕಾಯಂ ಉಪನ್ಯಾಸಕರು, 15 ಅತಿಥಿ ಉಪನ್ಯಾಸಕರಿದ್ದಾರೆ. ಕಾಲೇಜಿನಲ್ಲಿ 18 ಕೊಠಡಿಗಳು ಇದ್ದು, 360 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2022–23ನೇ ಸಾಲಿಗೆ ಹೋಲಿಸಿದರೆ 2023–24ನೇ ಸಾಲಿನಲ್ಲಿ ದಾಖಲಾತಿ ಹೆಚ್ಚಾಗಿದೆ.

ಬೋಧಕೇತರ ಸಿಬ್ಬಂದಿಯಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆ ಮಾತ್ರ ಭರ್ತಿಯಾಗಿದ್ದು, ಕಚೇರಿ ಅಧೀಕ್ಷಕರು ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಖಾಲಿಯಿದೆ. ಕಾಯಂ ಗ್ರಂಥಪಾಲಕರ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆ ಖಾಲಿಯಿದೆ.

ಕಾಲೇಜಿಗೆ ಇನ್ನೂ 5 ಬೋಧನಾ ಕೊಠಡಿ, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶೌಚಾಲಯ, ಪ್ರತ್ಯೇಕ ಸಭಾಂಗಣ, ಹೆಚ್ಚುವರಿ ಕೊಳವೆ ಬಾವಿ ಅಗತ್ಯವಿದೆ. ಶಿಥಿಲಗೊಂಡಿರುವ ಕಾಲೇಜು ರಸ್ತೆ ದುರಸ್ತಿ ಆಗಬೇಕಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಮುಖರು.

‘ಮನವಿ ಸಲ್ಲಿಕೆ’ ಹೊಸದಾಗಿ ಬಿಸಿಎ ಪದವಿ ಕೋರ್ಸ್ ಆರಂಭಿಸಲಾಗಿದೆ. ಹೆಚ್ಚಿನ ಮೂಲಸೌಲಭ್ಯಕ್ಕೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ದಾಖಲಾತಿ ಹೆಚ್ಚಿಸಲು ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ ಎಂದು ಪ್ರಾಂಶುಪಾಲ ಧನಂಜಯ ತಿಳಿಸಿದರು.

ಕಾಲೇಜಿನಲ್ಲಿ 2024–25 ನೇ ಸಾಲಿನ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಆರಂಭವಾಗಿದೆ. ಹೆಚ್ಚಿನ ಮಾಹಿತಿಗಾಗಿ 9448334888, 9901731216, 9448943919, 9449898011 ಈ ಮೊಬೈಲ್ ಫೋನ್ ಸಂಖ್ಯೆ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT