ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡುಗರ ಮೈ ನವಿರೇಳಿಸಿದ ಆಫ್ ಬೀಟ್ ಡ್ರೈವ್: ವಾಹನ ಚಲಾಯಿಸಿ ಸಾಹಸ ಮೆರೆದ ಸವಾರರು

Last Updated 8 ಅಕ್ಟೋಬರ್ 2022, 14:06 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಪ್ಪ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮನರಂಜನೆಗಾಗಿ ಶನಿವಾರ ಆಯೋಜಿಸಿದ್ದ 5ನೇ ವರ್ಷದ ಕೆ.ಆರ್.ಅರವಿಂದ್ ಆಫ್ ಬೀಟ್ ಡ್ರೈವ್ ನೋಡುಗರ ಮೈನವಿರೇಳಿಸಿತು.

ಹಿರೇಕೊಡಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಚಾಲನೆಗೊಂಡಿತು. ರಾಜ್ಯದ ಹಲವು ಭಾಗಗಳಿಂದ ಬಂದಿದ್ದ ಸವಾರರು ಶೆಟ್ಟಿಹಡ್ಲು, ಅಬ್ಬಿಗುಂಡಿ, ಹೊಕ್ಕಳಿಕೆ, ಕವಡೆಕಟ್ಟೆ ಮುಂತಾದ ಕಡೆಗಳಲ್ಲಿ ಕಡಿದಾದ ಮಾರ್ಗದಲ್ಲಿ ಸವಾಲನ್ನು ಸ್ವೀಕರಿಸುವ ಮೂಲಕ ಜೀಪ್, ಜಿಪ್ಸಿ, ಕಾರುಗಳನ್ನು ಚಲಾಯಿಸಿ ಹರ್ಷ ವ್ಯಕ್ತಪಡಿಸಿದರು.

ಶೆಟ್ಟಿಹಡ್ಲು ಸಮೀಪದ ಹಳ್ಳದಲ್ಲಿ ಸವಾರರು ವಾಹನ ಚಲಾಯಿಸಿದ ಪರಿ ನೋಡುಗರ ಎದೆ ಝಲ್ ಎನಿಸುವಂತಿತ್ತು. ವಾಹನ ಸವಾರರು ಅಡಿಕೆ, ತೆಂಗಿನತೋಟ, ಗದ್ದೆ, ಕಡಿದಾದ ಹೊಂಡ, ಇಳಿಜಾರು, ಕಲ್ಲುಬಂಡೆ ಮುಂತಾದ ಕ್ಲಿಷ್ಟಕರ ಮಾರ್ಗದಲ್ಲಿ, ಕೃಷಿ ಜಮೀನಿನಲ್ಲಿ ಕೃತವಾಗಿ ನಿರ್ಮಿಸಿದ ತಿರುವುಗಳಲ್ಲಿ ಸಾಗಿ 17 ಕಿಲೋ ಮೀಟರ್ ದೂರ ಕ್ರಮಿಸಿ, ಗುರಿ ತಲುಪಿದರು.

ಜೀಪ್ ಗಳಿಗೆ ಮೂರು ಬಾರಿ ಮಾತ್ರ ಅವಕಾಶ ನೀಡಲಾಗಿತ್ತು, ವಿಫಲವಾದ ವಾಹನಗಳನ್ನು ಜೆ.ಸಿ.ಬಿ, ಟ್ರಾಕ್ಟರ್ ಬಳಸಿ ಎಳೆಯಲಾಯಿತು. ಕಿರುತರೆ ನಟ ರಕ್ಷಿತ್ ಆಫ್ ರೋಡ್‌ ಡ್ರೈವ್ ನಲ್ಲಿ ಭಾಗವಹಿಸಿದ್ದರು. ಯುವಕರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಆಫ್ ರೋಡ್ ಡ್ರೈವ್ ನಲ್ಲಿ ಮಹಿಳೆಯರು, ಮಕ್ಕಳು ಕೂಡ ಭಾಗವಹಿಸಿ ಸಾಹಸ ಮೆರೆದರು.

ಕವಡೆಕಟ್ಟೆ ಪ್ರಕಾಶ್ ಅವರು ಆಫ್ ಬೀಟ್ ಡ್ರೈವ್ ಗೆ ಚಾಲನೆ ನೀಡಿದರು. ಕೊಪ್ಪ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಸಚಿನ್ ನಂದಿಗೋಡು, ಗೌರವಾಧ್ಯಕ್ಷ ಪೃಥ್ವಿರಾಜ್ ಕೌರಿ, ಕಾರ್ಯದರ್ಶಿ ರೋಹಿತ್, ಸದಸ್ಯರಾದ ವಿಕಾಸ್ ಬೇಗಾನೆ, ಸತೀಶ್ ಅದ್ದಡ, ಅನೂಪ್ ನಾರ್ವೆ, ಅಜಿತ್ ಬಿಕ್ಳಿ, ರಮೇಶ್ ಶೆಟ್ಟಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT