ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆ: ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯ

Published 8 ಮಾರ್ಚ್ 2024, 14:23 IST
Last Updated 8 ಮಾರ್ಚ್ 2024, 14:23 IST
ಅಕ್ಷರ ಗಾತ್ರ

ತರೀಕೆರೆ: ತರೀಕೆರೆ ವ್ಯಾಪ್ತಿಯಲ್ಲಿನ 18 ಜನ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಾತಿ ಹೊಂದಿದವರು ಹಳೆಯ ಪಿಂಚಣಿ ವ್ಯವಸ್ಥೆಗೆ ತಮ್ಮನ್ನು ಒಳಪಡಿಸುವಂತೆ ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಗೋವಿಂದಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಟಿ ಎಂ ದೇವರಾಜ್ ಮಾತನಾಡಿ ‘ನಿವೃತ್ತಿಯ ನಂತರ ಸರ್ಕಾರಿ ನೌಕರರ ಬದುಕಿಗೆ‌ ಭದ್ರತೆ ಸಿಗಬೇಕಾದರೆ ಎಲ್ಲಾ ಸರ್ಕಾರಿ ನೌಕರರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕು’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್. ನಾಗರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರವಿ, ಆನಂದ್ ಕುಮಾರ್, ಎಂ ಬಿ ರಾಮಚಂದ್ರಪ್ಪ, ಅನಂತಪ್ಪ, ಸುರೇಶ್, ಕುಮಾರಸ್ವಾಮಿ, ಮೀನಾಕ್ಷಮ್ಮ, ಸುಧಾ, ಶಾಂತಮ್ಮ, ಎನ್‌ಪಿಎಸ್ ನೌಕರರ ಸಂಘದ ಎಸ್ಎಂ ಖಾದ್ರಿ, ಕ್ಷೇತ್ರ ಸಮನ್ವಯಾಧಿಕಾರಿ ಉಮೇಶ್, ಶಿಕ್ಷಣ ಸಂಯೋಜಕ ವಸಂತ್ ಕುಮಾರ್, ಸತೀಶ್, ರಾಘವೇಂದ್ರ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT