ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಸಸಿ ನೆಡುವ ಕಾರ್ಯಕ್ರಮ 25ಕ್ಕೆ

Last Updated 23 ಫೆಬ್ರುವರಿ 2021, 14:08 IST
ಅಕ್ಷರ ಗಾತ್ರ

ಕಲಬುರ್ಗಿ: ಸಂತ ಸೇವಾಲಾಲ ಮಹಾರಾಜರ 282ನೇ ಜಯಂತ್ಯುತ್ಸವ ಹಾಗೂ ಡಾ. ರಾಮರಾವ ಮಹಾರಾಜರ ಗೌರವಾರ್ಥ ಇದೇ 25ರಂದು ಬೆಳಿಗ್ಗೆ 11ಕ್ಕೆ ಪಬ್ಲಿಕ್ ಗಾರ್ಡನ್ ಬಳಿಯ ಶ್ರೀಶ್ರೀ ರವಿಶಂಕರ ಗುರೂಜಿ ಜ್ಞಾನ ಆಶ್ರಮದಲ್ಲಿ 100 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಂತ ಸೇವಾಲಾಲ ಮಹಾರಾಜರ ಜನಜಾಗೃತಿ ಹಾಗೂ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಾಮರಾವ್ ಪವಾರ, ಈ ಬಾರಿ ಮೆರವಣಿಗೆ ಇರುವುದಿಲ್ಲ. ನೇರವಾಗಿ ಜ್ಞಾನ ಆಶ್ರಮದ ಆವರಣದಲ್ಲಿ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲಾಗುವುದು’ ಎಂದರು.

ಪೌರಾದೇವಿ ಶಕ್ತಪೀಠದ ಬಾಬು ಸಿಂಗ್ ಮಹಾರಾಜರು, ಸೋನ್ಯಾಲಗಿರಿಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಸಿದ್ಧಲಿಂಗ ಮಹಾಸ್ವಾಮಿಗಳು, ಜೇಮಸಿಂಗ್ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಡಾ.ಉಮೇಶ್ ಜಾಧವ ಉದ್ಘಾಟಿಸುವರು. ಶಾಸಕ ಡಾ. ಅವಿನಾಶ ಜಾಧವ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಾಬುರಾವ್ ಚವ್ಹಾಣ, ವಾಲ್ಮೀಕಿ ನಾಯಕ, ಸುಭಾಷ್ ರಾಠೋಡ ಹಾಗೂ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ ಚವ್ಹಾಣ, ಜಗನ್ನಾಥ ರಾಠೋಡ, ಕಿಶನ್ ಚವ್ಹಾಣ, ನಾಮದೇವ ಚವ್ಹಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT