ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ಹೊತ್ತಿ‌ ಉರಿದ ತೆಂಗಿನ ಮರ

Published 24 ಮೇ 2023, 16:19 IST
Last Updated 24 ಮೇ 2023, 16:19 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ತವಂದಿ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ತೆಂಗಿನ ಮರವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕಿಡಿ ಮನೆಯ ಎದುರಿನ ಚಪ್ಪರಕ್ಕೂ ಹೊತ್ತಿಕೊಂಡಿದ್ದು, ತಕ್ಷಣ ಮನೆಯವರು ಬೆಂಕಿ ನಂದಿಸಿದರು.

ಗ್ರಾಮದ ಹೇಮಲತಾ ಅವರ ತೋಟದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ತೆಂಗಿನ ಮರದ ಸಮೀಪದಲ್ಲಿದ್ದ ಎರಡು ಅಡಿಕೆ ಮರದ ಗರಿಗಳಿಗೂ ಬೆಂಕಿ ತಗುಲಿ ಸುಟ್ಟು ಹೋಗಿದೆ. 

‘ತಾಯಿಯೊಂದಿಗೆ ತೋಟದಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಬುಧವಾರ ಸಂಜೆ ಇದ್ದಕ್ಕಿದ್ದಂತೆ ಬಿರುಗಾಳಿ–ಮಳೆ ಆರಂಭವಾಯಿತು. ಮನೆಯ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಅದರ ಕಿಡಿ ಮನೆಯ ಎದುರಿನ ಚಪ್ಪರಕ್ಕೆ ಬಿದ್ದು ಉರಿಯತೊಡಗಿತು. ತಕ್ಷಣ ಮನೆಯವರೆಲ್ಲ ಸೇರಿ ಬೆಂಕಿ ನಂದಿಸಿದೆವು. ಸಿಡಿಲಿನ ಹೊಡೆತಕ್ಕೆ ತೆಂಗಿನ ಮರದಲ್ಲಿನ ಕಾಯಿಯ ಗೊಂಚಲುಗಳು ಇಳಿ ಬಿದ್ದಿವೆ. ಸುಳಿ ಸುಟ್ಟು ಹೋಗಿದೆ’ ಎಂದು ಹೇಮಲತಾ ಅವರ ಪುತ್ರ ಜಯಪ್ರಕಾಶ್ ನಾರಾಯಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT