ವಿಗ್ರಹ ಕಳವು ಯತ್ನ: ಮೂವರ ಬಂಧನ

7

ವಿಗ್ರಹ ಕಳವು ಯತ್ನ: ಮೂವರ ಬಂಧನ

Published:
Updated:
Deccan Herald

ಹೊಳಲ್ಕೆರೆ: ತಾಲ್ಲೂಕಿನ ಉಗಣೇಕಟ್ಟೆ ಗ್ರಾಮದ ಹೊರವಲಯದಲ್ಲಿರುವ ಹೊರಕೆರೆ ರಂಗನಾಥ ಸ್ವಾಮಿ ದೇವಾಲಯದ ಸಮೀಪ ನಿಧಿಶೋಧ ಹಾಗೂ ವಿಗ್ರಹ ಕಳವಿಗೆ ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಗಿರೀಶ, ಮಂಜುನಾಥ ಹಾಗೂ ತಿರುಮಲಾಪುರ (ಎಮ್ಮೆ ಹಟ್ಟಿ) ಗ್ರಾಮದ ರಂಗಸ್ವಾಮಿ ಬಂಧಿತ ಆರೋಪಿಗಳು.

ದೇವಾಲಯದ ಆವರಣದಲ್ಲಿ ನಿಧಿ ಇದೆ ಎಂದು ಜೋತಿಷಿಯೊಬ್ಬರು ಹೇಳಿದ್ದಾರೆ ಎಂದು ಹಾರೆ, ಸಲಾಕೆಗಳಿಂದ ಗುಂಡಿ ತೆಗೆಯುತ್ತಿದ್ದಾಗ ಆರೋಪಿಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾರೆ. ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !