ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ಕರಡಿ ಪ್ರತ್ಯಕ್ಷ; ಆತಂಕ

Published 14 ಜನವರಿ 2024, 15:57 IST
Last Updated 14 ಜನವರಿ 2024, 15:57 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ಯಾದಲಗಟ್ಟೆ ಗ್ರಾಮದ ಬಳಿ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಕರಡಿ ಪ್ರತ್ಯಕ್ಷವಾಗಿದೆ. ಈ ದೃಶ್ಯವನ್ನು ಬೈಕ್ ಸವಾರರು ಸೆರೆ ಹಿಡಿದಿದ್ದು, ವಿಡಿಯೊ ಎಲ್ಲೆಡೆ ಹರಿದಾಡಿದೆ.

ಈಚೆಗಷ್ಟೆ ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಮಹಿಳೆ ಮೇಲೆ ಕರಡಿ ಹಾಗೂ ಮರಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು.

ಹೀಗಾಗಿ ಯಾದಲಗಟ್ಟೆ, ಕ್ಯಾತಗೊಂಡನಹಳ್ಳಿ, ಕಾಲುವೆಹಳ್ಳಿ, ಗೌಡರಹಟ್ಟಿ, ಚಿತ್ರನಾಯಕನಹಳ್ಳಿ, ಕರಿಕೆರೆ, ವಿಶ್ವೇಶ್ವಪುರ ಮುಂತಾದ ಗ್ರಾಮದ ಜನರಲ್ಲಿ ಆತಂಕ ಉಂಟಾಗಿದೆ.

ಪ್ರತಿ 2-3 ದಿನಗಳಿಗೊಮ್ಮೆ ಗಡಿ ಭಾಗ್ರದ ಕ್ಯಾದಿಗುಂಟೆ, ಓಬಳಾಪುರ, ಪುಟ್ಲರಹಳ್ಳಿ, ಜಾಜೂರು, ತಿಪ್ಪರೆಡ್ಡಿಹಳ್ಳಿ, ದೊಡ್ಡಚೆಲ್ಲೂರು, ಪಿಲ್ಲಹಳ್ಳಿ, ಕಾಮಸಮುದ್ರ ಮುಂತಾದ ಗ್ರಾಮಗಳಿಗೆ ಅರಣ್ಯ ಸಿಬ್ಬಂದಿ ಹೋಗಿ ಸಂಜೆ ಮತ್ತು ಬೆಳಿಗ್ಗೆ ಮಬ್ಬುಗತ್ತಲಲ್ಲಿ ಹೊಲಗಳಿಗೆ ಒಂಟಿಯಾಗಿ ಓಗದಂತೆ ಜನರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

‘ಯಾದಲಗಟ್ಟೆ ಬಳಿ ಕರಡಿ ನಡೆದಾಡುತ್ತಿದೆ ಎಂದು ದೂರದಿಂದ ವಿಡಿಯೊ ಮಾಡಿದ್ದಾರೆ. ಅದು ಕರಡಿ ಅಂತ ಸರಿಯಾಗಿ ಗೊತ್ತಾಗುತ್ತಿಲ್ಲ. ಆದರೂ, ಆ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದೇನೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಏನಾದರೂ ತೊಂದರೆಯಾದರೆ ಮಾತ್ರ ಮೇಲಧಿಕಾರಿಗಳ ಒಪ್ಪಿಗೆ ಪಡೆದು ಕರಡಿಯನ್ನು ಹಿಡಿಯಬೇಕಿದೆ’ ಎಂದು ಸಾಮಾಜಿಕ ಅರಣ್ಯಾಧಿಕಾರಿ ಬಹುಗುಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT