ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಕರಿ ನಾಯಕ ಮಹಾದ್ವಾರ ತೆರವಿಗೆ ಆಕ್ರೋಶ

Published 14 ಮಾರ್ಚ್ 2024, 16:01 IST
Last Updated 14 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಹೊಳಲ್ಕೆರೆ: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಭಾನುವಳ್ಳಿಯಲ್ಲಿ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಗುರುವಾರ ಮದಕರಿ ನಾಯಕ ಯುವ ಸೇನೆಯ ಸದಸ್ಯರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬೀಬಿ ಫಾತಿಮಾ ಅವರಿಗೆ ಮನವಿ ಸಲ್ಲಿಸಿದರು.

ವಾಲ್ಮೀಕಿ ಗುರುಪೀಠದ ಹಿಂದಿನ ಸ್ವಾಮೀಜಿ ಪುಣ್ಯಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ 1999ರಲ್ಲಿ ಆಗಿನ ಸಚಿವ ಶಿವಪ್ಪ ನೇತೃತ್ವದಲ್ಲಿ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಆದರೆ ಈಗ ರಾಜಕೀಯ ದುರುದ್ದೇಶದಿಂದ ದಾವಣಗೆರೆ ಜಿಲ್ಲಾಡಳಿತ ಏಕಾಏಕಿ ಮಹಾದ್ವಾರ ಹಾಗೂ ಪ್ರತಿಮೆ ತೆರವುಗೊಳಿಸಿದೆ. ಸ್ಥಳೀಯ ಮುಖಂಡರ ವಿರೋಧ ಇದ್ದರೂ ಅದನ್ನು ಲೆಕ್ಕಿಸದೆ ತೆರವು ಮಾಡಿರುವುದು ಖಂಡನೀಯ. ಇದರಿಂದ ಚಿತ್ರದುರ್ಗದ ಪಾಳೇಗಾರ ಮದಕರಿ ನಾಯಕ ಹಾಗೂ ಇಡೀ ನಾಯಕ ಸಮುದಾಯಕ್ಕೆ ಅವಮಾನ ಮಾಡಿದಂತಾಗಿದೆ. ಭಾನುವಳ್ಳಿಯಲ್ಲಿ ಮತ್ತೆ ಮಹಾದ್ವಾರ ಹಾಗೂ ವಾಲ್ಮೀಕಿ ಪ್ರತಿಮೆ ನಿರ್ಮಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸೂರೇಗೌಡ, ಮದಕರಿ ನಾಯಕ ಯವಸೇನಾ ಸಮಿತಿಯ ಅಧ್ಯಕ್ಷ ರಾಜಣ್ಣ ಹಿರೇಕಂದವಾಡಿ, ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಹೊರಕೇರಪ್ಪ, ಗೌರಿ ರಾಜಕುಮಾರ್, ಮಂಜು, ರುದ್ರೇಶ್, ಸೋಮಶೇಖರಪ್ಪ, ಶಿವು, ಅರುಣ್ ಕುಮಾರ್, ಬಸವರಾಜ್, ಕೆ.ಬಿ. ಮಹಾಂತೇಶ್, ರಾಜು, ರಮೇಶ್, ಮಲ್ಲಿಕಾರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT