ಚಿತ್ರದುರ್ಗ: ಅವಿಶ್ವಾಸಕ್ಕೆ ಗೆಲುವು -ಅಧ್ಯಕ್ಷೆ ಪದಚ್ಯುತಿ

7

ಚಿತ್ರದುರ್ಗ: ಅವಿಶ್ವಾಸಕ್ಕೆ ಗೆಲುವು -ಅಧ್ಯಕ್ಷೆ ಪದಚ್ಯುತಿ

Published:
Updated:

ಚಿತ್ರದುರ್ಗ: ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು 25 ಸದಸ್ಯರು ಬೆಂಬಲಿಸಿದ್ದರಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಗುರುವಾರ ಅಧಿಕಾರ ಕಳೆದುಕೊಂಡರು.

ಉಪಾಧ್ಯಕ್ಷೆ ಸುಶೀಲಮ್ಮ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕರೆದಿದ್ದ ವಿಶೇಷ ಸಭೆಗೆ 37 ಸದಸ್ಯರ ಪೈಕಿ 27 ಜನ ಹಾಜರಾಗಿದ್ದರು. ಇದರಲ್ಲಿ ಅವಿಶ್ವಾಸದ ವಿರುದ್ಧ ಕೇವಲ ಎರಡು ಮತ ಚಲಾವಣೆ ಆದವು.

ಅಧ್ಯಕ್ಷರ ಪದಚ್ಯುತಿಗೆ ಪಕ್ಷಭೇದ ಮರೆತು ಒಂದಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಒಂದೂವರೆ ತಿಂಗಳಿಂದ ಅವಕಾಶ ಕೋರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !