ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಗೌರಸಮುದ್ರ: ಮಾರಿದೇವತೆ ಹುಂಡಿ ಹಣ ಎಣಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಸಮುದ್ರ (ಚಳ್ಳಕೆರೆ): ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರದಲ್ಲಿ ಗ್ರಾಮ ದೇವತೆ ಮಾರಮ್ಮ ದೇವಿಯ ಜಾತ್ರಾ ಆಚರಣೆ ಸೆ.14ರಂದು ಜರುಗಲಿದ್ದು, ತಾಲ್ಲೂಕು ಆಡಳಿತದಿಂದ ಬುಧವಾರ ದೇವಸ್ಥಾನದ ಹುಂಡಿ ಹಣದ ಎಣಿಕೆ ಕಾರ್ಯ ನಡೆಯಿತು.

‘ಒಟ್ಟು ₹ 2.30 ಲಕ್ಷ ಸಂಗ್ರಹವಾಗಿದೆ. ಕಳೆದ ವರ್ಷ ₹ 5.96 ಲಕ್ಷ ಹುಂಡಿ ಸಂಗ್ರಹವಾಗಿತ್ತು. ಕೋವಿಡ್ ಪರಿಣಾಮ ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಈ ಬಾರಿ ಕಡಿಮೆ ಹಣ ಸಂಗ್ರಹವಾಗಿದೆ’ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ತಿಳಿಸಿದರು.

ಉಪ ತಹಶೀಲ್ದಾರ್ ಅಬ್ದುಲ್‍ ಅಜೀಜ್, ಕಂದಾಯ ಅಧಿಕಾರಿ ರಫಿಸಾಬ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ, ಸದಸ್ಯ ನಾಗರಾಜ, ಗ್ರಾಮದ ಮುಖಂಡ ತಿಪ್ಪೇಸ್ವಾಮಿ, ಪಾಲಯ್ಯ, ಗ್ರಾಮಾಭಿವೃದ್ಧಿ ಅಧಿಕಾರಿ ಕೊರ್ಲಯ್ಯ, ಓಬಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.