ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಹುಣಸೆ ಹಣ್ಣು ತಿಂದು 12 ಕುರಿ ಸಾವು

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ಕರಿಯಾಲ ಗ್ರಾಮದಲ್ಲಿ ಘಟನೆ ನಡೆದಿದೆ.
Published 14 ಮೇ 2024, 5:19 IST
Last Updated 14 ಮೇ 2024, 5:19 IST
ಅಕ್ಷರ ಗಾತ್ರ

ಹಿರಿಯೂರು (ಚಿತ್ರದುರ್ಗ): ಬಿರುಗಾಳಿ ಸಹಿತ ಸುರಿದ ಮಳೆಗೆ ಉದುರಿ ಬಿದ್ದ ಹುಣಸೆ ಹಣ್ಣು ತಿಂದು 12 ಕುರಿ ಮೃತಪಟ್ಟ ಘಟನೆ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ಕರಿಯಾಲ ಗ್ರಾಮದಲ್ಲಿ ನಡೆದಿದೆ.

ರಾಮಕೃಷ್ಣಪ್ಪ ಎಂಬುವವರ 70 ಕುರಿಗಳಲ್ಲಿ 12 ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಹತ್ತು ಕುರಿಗಳ ಸ್ಥಿತಿ ಗಂಭೀರವಾಗಿದೆ. ಪಶುವೈದ್ಯ ಡಾ. ಅರುಣ್ ಚಿಕಿತ್ಸೆ ನೀಡಿದ್ದು, ಕೆಲವು ಕುರಿಗಳು ಸುಧಾರಿಸಿಕೊಳ್ಳುತ್ತಿವೆ.

ದರ ಕುಸಿತದ ಕಾರಣಕ್ಕೆ ಹುಣಸೆ ಹಣ್ಣು ಕೀಳದೇ ರೈತರು ಮರದಲ್ಲಿಯೇ ಬಿಟ್ಟುದ್ದರು. ಭಾನುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಹಣ್ಣು ಉದುರಿದ್ದವು. ಸೋಮವಾರ ಸಂಜೆ ಈ ಹಣ್ಣುಗಳನ್ನು ಕುರಿಗಳು ತಿಂದಿದ್ದವು. ಹುಣಸೆಹಣ್ಣು ಕುತ್ತಿಗೆಯಲ್ಲಿ ಸಿಕ್ಕಿಕೊಂಡಿದ್ದರೆ, ಬೀಜಗಳು ಹೊಟ್ಟೆ ಒಳಗೆ ಸೇರಿ ಊದಿಕೊಂಡ ಪರಿಣಾಮ ಕುರಿಗಳು ಸಾವನ್ನಪ್ಪಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT