ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಆಕರ್ಷಿಸಲು ಸಿದ್ಧವಾಯಿತು ‘ಸಖಿ ಮತಗಟ್ಟೆ ಕೇಂದ್ರ’

Published 15 ಏಪ್ರಿಲ್ 2024, 16:32 IST
Last Updated 15 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಚಳ್ಳಕೆರೆ: ಇದೇ 26ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅಂಗವಾಗಿ ಮತಗಟ್ಟೆಯತ್ತ ಮತದಾರರನ್ನು ಸೆಳೆಯಲು ಚುನಾವಣಾ ತಾಲ್ಲೂಕು ಸ್ವೀಪ್ ಸಮಿತಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

ತಾಲ್ಲೂಕು ಆಡಳಿತದ ಜತೆಗೂಡಿ ನಗರದ ಬಿಇಒ ಕಚೇರಿ ಆವರಣದ ಸರ್ಕಾರಿ ಉರ್ದು ಶಾಲೆ ಮತ್ತು ಕಾಟಪ್ಪನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಸಿ, ಗೋಡೆ ಮೇಲೆ ವಿವಿಧ ಚಿತ್ರ ಬಿಡಿಸುವ ಮೂಲಕ ಆಕರ್ಷಕ ಎರಡು ಸಖಿ ಮತಗಟ್ಟೆ ಕೇಂದ್ರ ಸಿದ್ಧಗೊಳಿಸಲಾಗಿದೆ.

ಆವರಣ ಸ್ವಚ್ಛಗೊಳಿಸಲಾಗಿದೆ. ಮತಗಟ್ಟೆ ಕೇಂದ್ರದ ಗೋಡೆ ಮೇಲೆ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಜೋಡೆತ್ತಿನ ಗಾಡಿ, ಜಾತ್ರೆ, ಉತ್ಸವ, ತೇರು, ಗಿಡ– ಮರ, ಬಳ್ಳಿ, ರಂಗೋಲಿ, ಬಯಲಾಟದ ಚಿತ್ರಣ, ಗುಡಿ– ಗೋಪುರ ಮುಂತಾದ ವರ್ಣ ರಂಜಿತ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ.

ಮತ ಹಾಗೂ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ‘ಎಲ್ಲರೂ ಮತದಾನ ಮಾಡೋಣ.. ಸದೃಢ ದೇಶ ಕಟ್ಟೋಣ’, ‘ಮಳೆ ಇರಲಿ, ಬಿಸಿಲಿರಲಿ ನಾನು ಮತ ಚಲಾಯಿಸುವೆ’, ‘ನನ್ನ ಮತ ನನ್ನ ಹಕ್ಕು’, ‘ತಪ್ಪದೇ ಮತದಾನ ಮಾಡಿ...’ ಹೀಗೆ ಹಲವು ಗೋಡೆ ಬರಹಗಳನ್ನು ಬರೆಯಿಸಲಾಗಿದೆ.

‘ಎರಡು ಸಖಿ ಮತಗಟ್ಟೆ ಕೇಂದ್ರ, ಒಂದು ಯುವಚೇತನ, ಒಂದು ಅಂಗವಿಕಲ ಸೇರಿ ನಗರ ಪ್ರದೇಶಲ್ಲಿ ಒಟ್ಟು 49 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿದೆ’ ಎಂದು ಸೋಮವಾರ ನಗರ ಪ್ರದೇಶದ ಮತಗಟ್ಟೆ ಕೇಂದ್ರಗಳ ಪರಿಶೀಲನೆ ನಡೆಸಿದ ಪೌರಾಯುಕ್ತ ಜೀವನ್‍ ಕಟ್ಟಿಮನಿ ತಿಳಿಸಿದರು.

‘16 ಮತಗಟ್ಟೆ ಕೇಂದ್ರಗಳಲ್ಲಿ ನೆರಳಿನ ವ್ಯವಸ್ಥೆ ಇಲ್ಲ. ಹೀಗಾಗಿ ನೆರಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ವಿದ್ಯುತ್ ದೀಪ, ಶೌಚಾಲಯ, ನೆರಳಿನ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT