ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುರಸಭೆ ಅಧ್ಯಕ್ಷರಿಗೆ ₹ 50 ಲಕ್ಷ ಲಂಚ ಕೊಡಿಸಿದ್ದೆ: ಹೊಸದುರ್ಗ ಶಾಸಕ ಗೋವಿಂದಪ್ಪ

ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮಾಡಿದ ಆರೋಪದ ಬಗ್ಗೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ತಿರುಗೇಟು
Published 16 ಜನವರಿ 2024, 15:06 IST
Last Updated 16 ಜನವರಿ 2024, 15:06 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಆಪ್ತರೊಬ್ಬರ ನಿವೇಶನಕ್ಕೆ ಇ–ಸ್ವತ್ತು ಪಡೆಯಲು ಹೊಸದುರ್ಗ ಪುರಸಭೆಯ ಅಧ್ಯಕ್ಷರಿಗೆ ₹ 50 ಲಕ್ಷ ಲಂಚವನ್ನು ನಾನೇ ಕೊಡಿಸಿದ್ದೆ. ಆಗ ಶಾಸಕರಾಗಿದ್ದ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಇದರಲ್ಲಿ ಎಷ್ಟು ಪಾಲು ಹೋಗಿದೆ ಎಂಬುದನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ. ಅವರು ಚರ್ಚೆಗೆ ಬರಲಿ’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸವಾಲೆಸೆದರು.

‘ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಶಾಸಕ ಬಿ.ಜಿ. ಗೋವಿಂದಪ್ಪ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಅವರು ಮೌನವಾಗಿದ್ದಾರೆ’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮಾಡಿದ ಆರೋಪದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಹರಿದಾಡಿದ್ದರಿಂದ ಶಾಸಕ ಗೋವಿಂದಪ್ಪ ಈ ಪ್ರತಿಕ್ರಿಯೆ ನೀಡಿದರು.

‘ಗೂಳಿಹಟ್ಟಿ ಶೇಖರ್ ಶಾಸಕರಾಗಿದ್ದ ಅವಧಿಯಲ್ಲಿ ಹೊಸದುರ್ಗ ಪಟ್ಟಣ ವ್ಯಾಪ್ತಿಯಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ಜೋರಾಗಿ ನಡೆಯಿತು. ನನಗೆ ಬೇಕಾದವರೊಬ್ಬರು ₹ 25 ಕೋಟಿ ಬಂಡವಾಳ ಹೂಡಿ ಬಡಾವಣೆ ಅಭಿವೃದ್ಧಿಪಡಿಸಿದ್ದರು. ಇ–ಸ್ವತ್ತು ನೀಡಲು ವಿನಾಕಾರಣ ಆರು ತಿಂಗಳು ಸತಾಯಿಸಲಾಯಿತು. ಅಂತಿಮವಾಗಿ ಲಂಚ ನೀಡಬೇಕಾಯಿತು. ಲಂಚ ಕೊಡುವುದು ತಪ್ಪು ಎಂಬುದು ಗೊತ್ತಿದ್ದರೂ ಅನಿವಾರ್ಯತೆ ಸೃಷ್ಟಿಸಲಾಯಿತು’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಲಂಚ ಕೊಟ್ಟಿರುವುದು ಗ್ಯಾರಂಟಿ, ಪಡೆದುಕೊಂಡಿದ್ದು ಹಾಗೂ ತಿಂದಿರುವುದು ಗ್ಯಾರಂಟಿ. ಇದರಲ್ಲಿ ಗೂಳಿಹಟ್ಟಿ ಅವರಿಗೆ ಪಾಲಿದೆಯೋ ಇಲ್ಲವೋ ಎಂಬುದನ್ನು ಎದುರಿಗೆ ಬಂದರೆ ಬಹಿರಂಗಪಡಿಸುತ್ತೇನೆ. ನಾನು ಇಂತಹ ಯಾವುದೇ ದಂಧೆಯಲ್ಲಿ ತೊಡಗಿದ್ದನ್ನು ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ’ ಎಂದು ಅವರು ಸ್ಪಷ್ಟಪ‍ಡಿಸಿದರು.

‘ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಶಾಸಕ ಬಿ.ಜಿ. ಗೋವಿಂದಪ್ಪ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಅವರು ಮೌನವಾಗಿದ್ದಾರೆ’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮಾಡಿದ ಆರೋಪದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಹರಿದಾಡಿದ್ದರಿಂದ ಶಾಸಕ ಗೋವಿಂದಪ್ಪ ಈ ಪ್ರತಿಕ್ರಿಯೆ ನೀಡಿದರು.

ಅವರು ಶಾಸಕರಾಗಿದ್ದಾಗ (ಗೂಳಿಹಟ್ಟಿ ಶೇಖರ್‌) ಎಲ್ಲ ರೀತಿಯ ದಂಧೆಗಳು ನಡೆಯುತ್ತಿದ್ದವು. ಎಲ್ಲೋ ಕುಳಿತು ಆಡಿಯೊ ಬಿಡುಗಡೆ ಮಾಡುವುದು ಯಾವ ಗಟ್ಟಿತನ. ಎದುರಿಗೆ ಬಂದು ಮಾತನಾಡಲಿ.
-ಬಿ.ಜಿ.ಗೋವಿಂದಪ್ಪ ಶಾಸಕ ಹೊಸದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT