ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಮುದಾಯಕ್ಕೆ 2 ಎಕರೆ ಭೂಮಿ ಮಂಜೂರು: ಶಾಸಕ ಗೋಪಾಲಕೃಷ್ಣ ಭರವಸೆ

Published 14 ಡಿಸೆಂಬರ್ 2023, 14:17 IST
Last Updated 14 ಡಿಸೆಂಬರ್ 2023, 14:17 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣದಲ್ಲಿ ದಲಿತ ಸಮುದಾಯಗಳು ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಭರವಸೆ ನೀಡಿದರು.

ತಾಲ್ಲೂಕಿನ ರಾಂಪುರದಲ್ಲಿ ಗುರುವಾರ ಭೇಟಿಯಾಗಿದ್ದ ತಾಲ್ಲೂಕಿನ ದಲಿತ ಮುಖಂಡರ ನಿಯೋಗ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು, ಶೈಕ್ಷಣಿಕ, ಸಾಮಾಜಿಕ, ಸ್ವ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಸ್ಥಳದ ಅವಶ್ಯತೆ ಇದೆ. ಈಗಾಗಲೇ ಇತರ ಸಮುದಾಯಗಳಿಗೆ ಸ್ಥಳ ನೀಡುವ ಜತೆಗೆ ಭವನ ನಿರ್ಮಾಣ ಕಾರ್ಯವನ್ನು ಮಾಡಲಾಗಿದೆ. ಆದ್ದರಿಂದ ಎಲ್ಲ ರಂಗಗಳಲ್ಲಿ ಅತ್ಯಂತ ಹಿಂದುಳಿದಿರುವ ನಮ್ಮ ಸಮುದಾಯಕ್ಕೂ ಅನುಕೂಲ ಮಾಡಿಕೊಡಬೇಕು ಎಂದು ದಲಿತ ಮುಖಂಡರು ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಜತೆ ದೂರವಾಣಿಯಲ್ಲಿ ಚರ್ಚಿಸಿದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ದಲಿತ ಸಮುದಾಯದ ಮುಖಂಡರಾಡ ಜಿ. ಪ್ರಕಾಶ್, ಕೊಂಡಾಪುರ ಪರಮೇಶ್ವರಪ್ಪ, ಎಸ್. ಪರಮೇಶ್, ಬಿ.ಟಿ. ನಾಗಭೂಷಣ, ದಡಗೂರು ಮಂಜುನಾಥ್, ಓ. ಕರಿಬಸಪ್ಪ, ಹೊನ್ನೂರಪ್ಪ, ಗಂಗಾಧರ್, ಯರ್ಜೇನಹಳ್ಳಿ ನಾಗರಾಜ್, ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT