ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ | ಅಸ್ತಿಪಂಜರದಂತೆ ಕಾಣುವ ವಿದ್ಯುತ್ ಕಂಬ!

Published 6 ಡಿಸೆಂಬರ್ 2023, 14:01 IST
Last Updated 6 ಡಿಸೆಂಬರ್ 2023, 14:01 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಅನತಿ ದೂರದಲ್ಲಿರುವ ರೈತರ ಜಮೀನೊಂದರಲ್ಲಿ ವಿದ್ಯುತ್‌ ಕಂಬ ಶಿಥಿಲಾವಸ್ಥೆ ತಲುಪಿದೆ.

ತುಂಬಾ ಹಳೆಯದಾದ ವಿದ್ಯುತ್ ಕಂಬದ ಕಬ್ಬಿಣದ ಸರಳುಗಳು ಗಾಳಿ, ಮಳೆ ಬಿಸಿಲಿಗೆ ಆಚೆ ಬಂದಿವೆ. ಇವುಗಳಲ್ಲಿ ನಿತ್ಯವೂ ವಿದ್ಯುತ್ ಹರಿಯುತ್ತಿದೆ. ಆಕಸ್ಮಿಕವಾಗಿ ಯಾರಾದರೂ ಸ್ಪರ್ಶಿಸಿದರೆ ವಿದ್ಯುತ್ ಆಘಾತ ಆಗುವುದು ಖಚಿತ. ರೈತರ ಕೊಳವೆಬಾವಿಗಳಿಗೆ ಈ ಕಂಬ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದು, ವಿದ್ಯುತ್ ತಂತಿಗಳು ನೇತಾಡುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ. 

ಕಂಬದ ಸಮೀಪದಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ಇದೆ. ಜೋರು ಗಾಳಿ ಬೀಸಿದರೂ ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಳೆ ಬಂದಾಗ ಅಥವಾ ಜಮೀನಿನ ಬೆಳೆಗಳಿಗೆ ನೀರು ಹಾಯಿಸಿದರೆ ನೆಲದ ಮೇಲೂ ವಿದ್ಯುತ್ ಸಂಚಾರವಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳನ್ನು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇನ್ನಾದರೂ ಯಾವುದೇ ಗಂಭೀರ ಸ್ವರೂಪದ ಅವಘಡ ಎದುರಾಗುವ ಮೊದಲೇ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡಬೇಕು

ವೃಷಭೇಂದ್ರಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT