ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳರು ಸ್ವಾಭಿಮಾನದ ಸಂಕೇತ: ಶಾಸಕ ಚಂದ್ರಪ್ಪ

Published 1 ಫೆಬ್ರುವರಿ 2024, 13:58 IST
Last Updated 1 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಹೊಳಲ್ಕೆರೆ: ಕಾಯಕ ಜೀವಿಗಳಾಗಿರುವ ಮಡಿವಾಳ ಸಮುದಾಯವು ಸ್ವಾಭಿಮಾನದ ಸಂಕೇತವಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ಬಣ್ಣಿಸಿದರು.

ಪಟ್ಟಣದ ಮಡಿವಾಳ ಸಮುದಾಯ ಭವನದಲ್ಲಿ ಗುರುವಾರ ನಡೆದ ಮಡಿವಾಳ ಮಾಚೀದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಡಿವಾಳ ಸಮುದಾಯವು ಶೂರತ್ವ, ನೇರ ನುಡಿ, ದಿಟ್ಟತನಕ್ಕೆ ಹೆಸರಾಗಿದೆ. ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿದೆ. ಇದಕ್ಕೆ ನನ್ನ ಸಹಮತವೂ ಇದೆ. ಮಡಿವಾಳ ಸಮುದಾಯದವರು ಸಂಘಟಿತರಾಗುವ ಮೂಲಕ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬೇಕು. ಮುಂದಿನ ವರ್ಷದ ಒಳಗೆ ಮಡಿವಾಳ ಸಮುದಾಯ ಭವನದ ಮೊದಲ ಮಹಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

ತಹಶೀಲ್ದಾರ್ ಬೀಬಿ ಫಾತಿಮಾ ಮಾತನಾಡಿ, ‘ಮಡಿವಾಳ ಮಾಚೀದೇವ ಪವಾಡ ಪುರುಷನಾಗಿದ್ದು, ಅವರು ವೀರಭದ್ರನ ಪುನರ್‌ಜನ್ಮ’ ಎಂದರು.

ಶಿಕ್ಷಕ ವೀರೇಶ್, ಮಡಿವಾಳ ಮಾಚೀದೇವರ ಬಗ್ಗೆ ಉಪನ್ಯಾಸ ನೀಡಿದರು. ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ಧೃವಮಾರ್, ಪುರಸಭೆ ಸದಸ್ಯರಾದ ಪೂರ್ಣಿಮಾ ಬಸವರಾಜ್, ಆರ್.ಎ.ಅಶೋಕ್, ಮುರುಗೇಶ್, ಗುರುಸ್ವಾಮಿ, ಮಂಜುನಾಥ್, ರಾಜಪ್ಪ, ಟಿಪಿಒ ವಿಜಯ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ, ಬಿಸಿಎಂ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಅಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT