ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಪಟ್ಟಾಭಿಷೇಕ ರಜತ ಮಹೋತ್ಸವಕ್ಕೆ ಸಿದ್ದಯ್ಯನಕೋಟೆ ಸಜ್ಜು

ಸಾಮಾನ್ಯ ಪೀಠಕ್ಕೆ ಪರಿಶಿಷ್ಟ ಜಾತಿ ಸ್ವಾಮೀಜಿ ಪೀಠಾಧಿಪತಿ ವಿಶೇಷತೆ
Published 15 ಫೆಬ್ರುವರಿ 2024, 5:59 IST
Last Updated 15 ಫೆಬ್ರುವರಿ 2024, 5:59 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ದುಶ್ಚಟಗಳನ್ನು ಜೋಳಿಗೆಗೆ ಹಾಕಿ’ ಎಂಬ ಖ್ಯಾತಿ ಮೂಲಕ ನಾಡಿನಾದ್ಯಂತ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸಿದ ಕೀರ್ತಿ ಇಳಕಲ್‌ನ ವಿಜಯ ಮಹಾಂತೇಶ್ವರ ಮಠದ್ದು. ಇದೇ ಉದ್ದೇಶದಿಂದ ತಾಲ್ಲೂಕಿನಲ್ಲಿ ಆರಂಭವಾದ ಸಿದ್ದಯ್ಯನಕೋಟೆ ಶಾಖಾ ಮಠದಲ್ಲಿ ರಜತ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ.

1998 ಏಪ್ರಿಲ್ 21ರಿಂದ ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಶಾಖಾಮಠ ಕಾರ್ಯಾರಂಭ ಮಾಡಿದ್ದು, ಪ್ರಥಮ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಅವರ ಪಟ್ಟಾಭಿಷೇಕ ರಜತ ಮಹೋತ್ಸವವೂ ನಡೆಯುತ್ತಿದೆ.

ಹಲವು ವರ್ಷಗಳ ಕಾಲ ಸೈಕಲ್‌ನಲ್ಲಿ ಹಳ್ಳಿಗಳನ್ನು ಸುತ್ತಿ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಬಸವಲಿಂಗ ಸ್ವಾಮೀಜಿ ಜನರಿಗೆ ಹತ್ತಿರವಾದರು.

ಈಗಲೂ ಇದೇ ಕಾರ್ಯಕ್ಕೆ ಮಠವು ಮುಂಚೂಣಿಯಲ್ಲಿದೆ. ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಗೆ ಮೀಸಲಾಗಿದ್ದ ಮಠದಲ್ಲಿ ಈಗ ಶೈಕ್ಷಣಿಕ ಸೇವೆ ನೀಡಲಾಗುತ್ತಿದೆ. ನೂರಾರು ಮಕ್ಕಳಿಗೆ ಉಚಿತ ವಸತಿಯುತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಮಕ್ಕಳಿಗೆ ಪ್ರತಿದಿನ ಬಸವಲಿಂಗ ಸ್ವಾಮೀಜಿ ಅವರೇ ಖುದ್ದು ಊಟ ತಯಾರಿಸುವುದು ವಿಶಿಷ್ಟಗಳಲ್ಲಿ ಒಂದು.

ಮಠದ ಸುತ್ತ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಿ ಆಹಾರ ಧಾನ್ಯ ಉತ್ಪಾದಿಸಲಾಗುತ್ತಿದೆ. ಕೃಷಿ ಕಾರ್ಯದಲ್ಲೂ ಸ್ವಾಮೀಜಿ ಸಕ್ರಿಯರಾಗಿದ್ದಾರೆ. ಇದೇ ಕಾರಣಗಳಿಗೆ ಹಲವು ಸಂಘ–ಸಂಸ್ಥೆಗಳ ಗೌರವಕ್ಕೂ ಸ್ವಾಮೀಜಿ ಪಾತ್ರರಾಗಿದ್ದಾರೆ.

ಸಾಮಾನ್ಯ ಪೀಠಕ್ಕೆ ಪರಿಶಿಷ್ಟ ಜಾತಿ ಸ್ವಾಮೀಜಿ: 

ಮಠವು ಸಾಮಾನ್ಯ ಪೀಠವಾಗಿದ್ದು, ಗ್ರಾಮಸ್ಥರು ಇದಕ್ಕೆ ಸ್ವಾಮೀಜಿಯೊಬ್ಬರನ್ನು ನೀಡುವಂತೆ ವಿಜಯ ಮಹಾಂತೇಶ್ವರ ಮಠಕ್ಕೆ ಮನವಿ ಮಾಡಿದ್ದರಂತೆ. 1994ರಲ್ಲಿ ಬೀದರ್‌ನಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು, ‘ಬಸವ ತತ್ವಗಳ ಬಗ್ಗೆ ಪ್ರಚಾರ ಮಾಡುತ್ತಿರುವ ಸ್ವಾಮೀಜಿಗಳ ಪೈಕಿ ಯಾರಾದರೂ ತಮ್ಮ ಮಠಕ್ಕೆ ದಲಿತ ಸ್ವಾಮೀಜಿಯನ್ನು ನೇಮಕ ಮಾಡಿದ್ದೀರಾ, ಈ ಮೂಲಕ ಸಮಾನತೆ ಕಾರ್ಯಕ್ಕೆ ಶ್ರಮಿಸಿದ್ದೀರಾ’ ಎಂದು ಪ್ರಶ್ನೆ ಮಾಡಿದರಂತೆ. ‘ಮಾಡಿಲ್ಲವಾದಲ್ಲಿ ಮಾಡುವಿರಾ? ಎಂದು ಸಭೆಯಲ್ಲಿ ಸ್ವಾಮೀಜಿಗಳಿಗೆ ಸವಾಲು ಹಾಕಿದಾಗ, ಸಭೆಯಲ್ಲಿದ್ದ ಮಹಾಂತ ಅಪ್ಪಗಳು, ‘ನಾನು ಇದನ್ನು ಮಾಡುತ್ತೇನೆ’ ಎಂದು ಹೇಳಿದ ಫಲಶೃತಿಯೇ ಸಿದ್ದಯ್ಯನಕೋಟೆ ಮಠಕ್ಕೆ ದಲಿತ ಸಮುದಾಯದ ಬಸವಲಿಂಗ ಸ್ವಾಮೀಜಿ ನೇಮಕವಾದರು.

ಈ ಮೂಲಕ ಮಠ ರಾಜ್ಯದ ಗಮನ ಸೆಳೆದಿತ್ತು. ಫೆ.15ರಿಂದ 19ರವರೆಗೆ ಮಠದ ಆವರಣದಲ್ಲಿ ರಜತ ಮಹೋತ್ಸವ ಸಿದ್ಧತೆ ನಡೆದಿದ್ದು, ಹಲವು ಸ್ವಾಮೀಜಿಗಳು ಜನಪ್ರತಿನಿಧಿಗಳು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.ಅನ್ನದಾಸೋಹ ಅಕ್ಷರಸೇವೆ ದುಶ್ಚಟ ಜಾಗೃತಿ ಮೂಲಕ ಬಸವಲಿಂಗ ಸ್ವಾಮೀಜಿ ಈ ಭಾಗದಲ್ಲಿ ಖ್ಯಾತವಾಗಿದ್ದಾರೆ. ಸರಳತೆ ಅವರ ಆಭರಣ. ರಜತ ಮಹೋತ್ಸವ ಯಶಸ್ವಿಗೊಳಿಸುವ ಮೂಲಕ ಇನ್ನಷ್ಟು ಉತ್ಸಾಹ ತುಂಬಬೇಕಿದೆ. ಎಚ್. ಆಂಜನೇಯ ಸ್ವಾಗತ ಸಮಿತಿ ಗೌರವಾಧ್ಯಕ್ಷಅನ್ನದಾಸೋಹ ಅಕ್ಷರಸೇವೆ ದುಶ್ಚಟ ಜಾಗೃತಿ ಮೂಲಕ ಬಸವಲಿಂಗ ಸ್ವಾಮೀಜಿ ಈ ಭಾಗದಲ್ಲಿ ಖ್ಯಾತವಾಗಿದ್ದಾರೆ. ಸರಳತೆ ಅವರ ಆಭರಣ. ರಜತ ಮಹೋತ್ಸವ ಯಶಸ್ವಿಗೊಳಿಸುವ ಮೂಲಕ ಇನ್ನಷ್ಟು ಉತ್ಸಾಹ ತುಂಬಬೇಕಿದೆ. ಎಚ್. ಆಂಜನೇಯ ಸ್ವಾಗತ ಸಮಿತಿ ಗೌರವಾಧ್ಯಕ್ಷ

ಬಸವಲಿಂಗ ಸ್ವಾಮೀಜಿ.
ಬಸವಲಿಂಗ ಸ್ವಾಮೀಜಿ.
ಅನ್ನದಾಸೋಹ ಅಕ್ಷರಸೇವೆ ದುಶ್ಚಟ ಜಾಗೃತಿ ಮೂಲಕ ಬಸವಲಿಂಗ ಸ್ವಾಮೀಜಿ ಈ ಭಾಗದಲ್ಲಿ ಖ್ಯಾತವಾಗಿದ್ದಾರೆ. ಸರಳತೆ ಅವರ ಆಭರಣ. ರಜತ ಮಹೋತ್ಸವ ಯಶಸ್ವಿಗೊಳಿಸುವ ಮೂಲಕ ಇನ್ನಷ್ಟು ಉತ್ಸಾಹ ತುಂಬಬೇಕಿದೆ.
ಎಚ್. ಆಂಜನೇಯ ಸ್ವಾಗತ ಸಮಿತಿ ಗೌರವಾಧ್ಯಕ್ಷ
ಕುಗ್ರಾಮವಾಗಿದ್ದ ಸಿದ್ದಯ್ಯನಕೋಟೆಯು ಇಂದು ಮಠದ ಕಾರ್ಯವೈಖರಿಯಿಂದಾಗಿ ರಾಜ್ಯದಲ್ಲಿ ಹೆಸರು ಪಡೆದಿದೆ. ಕಾಯಕಕ್ಕೆ ಖ್ಯಾತಿಯಾಗಿರುವ ಮಠವು ಇನ್ನಷ್ಟು ಜನಮುಖಿಯಾಗಿ ಕೆಲಸ ಮಾಡಲಿದೆ.
ಬೋಗೇಶ್ ಗೌಡ ಅಧ್ಯಕ್ಷ ಬಸವ ಕೇಂದ್ರ
ಮಹೋತ್ಸವಕ್ಕೆ ಇಂದು ಚಾಲನೆ
ಫೆ.15ರಂದು ರಜತ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ವೈವಿಧ್ಯಮಯ ಕಾರ್ಯಕ್ರಮ ನಡೆಯಲಿವೆ.  ‘ಶೈಕ್ಷಣಿಕ ಕ್ಷೇತ್ರದಲ್ಲಿ ಶರಣರ ಪಾತ್ರ’ ಗೋಷ್ಠಿ ಯುವಗೋಷ್ಠಿ ಫೆ. 16 ರಂದು ‘ಗಡಿನಾಡಿಗರ ಬದುಕು ಬವಣೆ’ ಮಹಿಳಾಗೋಷ್ಠಿ ನಡೆಯಲಿದೆ. ಫೆ. 17ರಂದು ಕೃಷಿಗೋಷ್ಠಿ ಮಹಾಂತ ಶಿವಯೋಗಿಗಳ ಸ್ಮರಣೆ ಫೆ. 18ರಂದು ‘ಬಸವ ತತ್ವ ಸಮಾವೇಶ’ ಸಂಜೆ ‘ಗುರುಕಾರುಣ್ಯ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಫೆ.19ರಂದು ಜನಪದ ಜಾತ್ರೆ ಮೂಲಕ ಮಹೋತ್ಸವಕ್ಕೆ ತೆರೆಬೀಳಲಿದೆ. ಬಸವವತ್ವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ನಿರೀಕ್ಷೆಯಿದೆ. ಸಚಿವರಾದ ಎಚ್.ಸಿ. ಮಹಾದೇವಪ್ಪ ಡಿ. ಸುಧಾಕರ್ ನಾಗೇಂದ್ರ ಇಳಕಲ್‌ನ ಗುರು ಮಹಾಂತ ಸ್ವಾಮೀಜಿ ಮೂರುಸಾವಿರ ಮಠದ ನಿರಂಜನ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT