ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಚ್ಚಂಗಿ ಯಲ್ಲಮ್ಮ ಸಿಡಿ ಉತ್ಸವ

Published 26 ಮೇ 2024, 3:06 IST
Last Updated 26 ಮೇ 2024, 3:06 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಶಕ್ತಿ ದೇವತೆ ಉಚ್ಚಂಗಿ ಯಲ್ಲಮ್ಮ ಅಮ್ಮನವರ ಸಿಡಿ ಉತ್ಸವ ಶನಿವಾರ ಶ್ರದ್ದಾ ಭಕ್ತಿಯಿಂದ ನೆರವೇರಿತು.

ದೊಡ್ಡಪೇಟೆಯಲ್ಲಿ ನೆಲೆಸಿರುವ ಅಮ್ಮನವರ ಜಾತ್ರಾ ಮಹೋತ್ಸವ ಒಂದು ವಾರದಿಂದ ನಡೆಯುತ್ತಿದೆ. ವಿವಿಧ ರೀತಿಯ ಪೂಜೆಗಳನ್ನು ನೇರವೇರಿಸಿದ ಬಳಿಕ ಶುಕ್ರವಾರ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗಿತ್ತು. ಹರಕೆ ಹೊತ್ತ ಭಕ್ತರು ಶನಿವಾರ ತಾಯಿಯ ಸನ್ನಿಧಿಯಲ್ಲಿ ಸಿಡಿ ಆಡುವುದರ ಮೂಲಕ ಭಕ್ತಿ ಸಮರ್ಪಿಸಿದರು.

ತಾಯಿಯಲ್ಲಿ ಹರಕೆ ಕಟ್ಟಿಕೊಂಡ ಭಕ್ತರು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿ ತಾಯಿಯ ಸಿಡಿ ಉತ್ಸವದಲ್ಲಿ ಪಾಲ್ಗೊಂಡರು. ಉಪವಾಸವಿದ್ದು ಮೈಗೆ ಅರಿಸಿಣ ಲೇಪಿಸಿಕೊಂಡು ತಲೆಗೆ ಧಿರಿಸು ಧರಿಸಿದ್ದರು. ಕೈಯಲ್ಲಿ ಖಡ್ಗವನ್ನು ಹಿಡಿದು ತಾಯಿಗೆ ಪ್ರಿಯವಾದ ಉರಿಮೆಯ ನಾದದೊಂದಿಗೆ ಸನ್ನಿಧಾನಕ್ಕೆ ಆಗಮಿಸಿದರು. ಪೂಜೆಯನ್ನು ಸಲ್ಲಿಸಿ ಸಿಡಿ ಕಂಬವನ್ನು ಮೂರು ಬಾರಿ ಸುತ್ತಿ ಹರಕೆ ತೀರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಸಿಡಿ ಉತ್ಸವ ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಹೀಗಾಗಿ ಸಮಿತಿ ಸಿಡಿ ಉತ್ಸವಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT