ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಟೈಲರ್ ವೃತ್ತಿ ಸಹಕಾರಿ

Published 26 ಮೇ 2024, 14:05 IST
Last Updated 26 ಮೇ 2024, 14:05 IST
ಅಕ್ಷರ ಗಾತ್ರ

ಹೊಸದುರ್ಗ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಟೈಲರ್ ವೃತ್ತಿ ಸಹಕಾರಿಯಾಗಲಿದೆ. ಈ ಮೂಲಕ ತಮ್ಮ ಮಕ್ಕಳಿಗೆ ಉಜ್ವಲವಾದ ಭವಿಷ್ಯ ನೀಡಲು ಸಾಧ್ಯವಾಗಲಿದೆ ಎಂದು ಪುರಸಭೆ ಸದಸ್ಯೆ ಸ್ವಾತಿ ಪ್ರದೀಪ್ ತಿಳಿಸಿದರು.

ಕರ್ನಾಟಕ ರಾಜ್ಯ ಜವಳಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ವೃತ್ತಿ ಮತ್ತು ಕೌಶಲ ತರಬೇತಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಹಮ್ಮಿಕೊಂಡಿದ್ದ ಟೈಲರಿಂಗ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಈ ಹಿಂದೆ ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದ ಮಹಿಳೆ ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದರು.

ಉದ್ಯಮಿ ಸದ್ಗುರು ಪ್ರದೀಪ್ ಮಾತನಾಡಿ, ‘ಟೈಲರಿಂಗ್ ತರಬೇತಿಗೆ ಮಹಿಳೆಯರು ಕೇವಲ ಪ್ರಮಾಣಪತ್ರ ಪಡೆಯಲು ಬರಬಾರದು. ಅನುಭವಿ ತರಬೇತುದಾರರಿಂದ ತರಬೇತಿ ಪಡೆದು, ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಂಡಾಗ ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ಯಾವುದೇ ವೃತ್ತಿಯಲ್ಲಿ ಮೊದಲು ನಮ್ಮಲ್ಲಿಗೆ ಬರುವ ಗ್ರಾಹಕರನ್ನು ಸೌಜನ್ಯದಿಂದ ಮಾತನಾಡಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಶಶಿಕಲಾ ಅಶೋಕ್, ಪುರಸಭಾ ಮಾಜಿ ಸದಸ್ಯರಾದ ಸವಿತಾ ರಮೇಶ್, ಅಗ್ರಿಮಾರ್ಟ್ ಗೋಪಾಲಕೃಷ್ಣ ನಿಂಗಪ್ಪ ಹಾಗೂ ತರಬೇತುದಾರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT