ಜೆಎಂಐಟಿ ವೃತ್ತ, ಹೊಸಪೇಟೆ ರಸ್ತೆ (ಎನ್ಎಚ್ 13), ಚಳ್ಳಕೆರೆ ಟೋಲ್ ಗೇಟ್, ತುರುವನೂರು ರಸ್ತೆ ಪ್ರವೇಶ ದ್ವಾರ, ಜಿಲ್ಲಾಧಿಕಾರಿ ಕಚೇರಿ, ಒನಕೆ ಓಬವ್ವ ವೃತ್ತ, ಎಂ.ಜಿ.ಸರ್ಕಲ್ ಸೇರಿದಂತೆ, ಹಲವು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರ ಪ್ರವೇಶಿಸುವ ಎಲ್ಲ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುತ್ತಿದ್ದರು.