ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಹಣ್ಣಿನ ಬೆಲೆ ಕುಸಿತ

Last Updated 6 ಜೂನ್ 2011, 6:15 IST
ಅಕ್ಷರ ಗಾತ್ರ

ಹೊಳಲ್ಕೆರೆ: `ಇಪ್ಪತ್ ರೂಪಾಯ್‌ಗೆ ಎರಡ್ ಕೆಜಿ, ಇಪ್ಪತ್ ರೂಪಾಯ್‌ಗೆ ಎರಡ್ ಕೆಜಿ, ಬನ್ನಿ, ಬನ್ನಿ, ಬಾಳ ಸೀ, ಬಾಳ ಸೀ.......~

- ಪಟ್ಟಣದ ರಸ್ತೆ ಬದಿಯಲ್ಲಿ ಮಾವು ಮಾರುವ ವ್ಯಾಪಾರಿಗಳ ಈ ಕೂಗು ಮಾರ್ದನಿಸುತ್ತದೆ. ಯಾವ ಹಣ್ಣು ಕೊಳ್ಳೋದು, ಯಾವುದನ್ನು ಬಿಡೋದು ಎಂಬ ಗೊಂದಲಕ್ಕೆ ಬಿದ್ದ ಜನ `ಹತ್ ರೂಪಾಯ್ ಜಾಸ್ತಿ ಆಯ್ತು, ಹದ್ನೈದ್ ರೂಪಾಯ್‌ಗೆ ಎರಡ್ ಕೆಜಿ ಕೊಡ್ತೀಯ~ ಎಂದು ಚೌಕಾಸಿ ಮಾಡಿ ಮುಂದೆ ಹೋಗುತ್ತಾರೆ.

ಪಟ್ಟಣದಲ್ಲಿ ಈಗ ಎಲ್ಲೆಲ್ಲೂ ಮಾವಿನ ಹಣ್ಣಿನ ಘಮ. ಯಾವ ಬೀದಿಗೆ ಹೋದರೂ ಮಾವಿನದೇ ಸುವಾಸನೆ. ಮಾರಾಟದ ಭರಾಟೆ ಜೋರಾಗಿದ್ದರೂ, ಬೆಲೆ ಇಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ತೋತಾಪುರಿ ್ಙ 2, ಸಿಂಧೂರ ್ಙ  8, ಗೋವಾ, ಕಸಿ ಮತ್ತಿತರ ಹಣ್ಣುಗಳು ್ಙ 10ಕ್ಕೆ ಕೆಜಿಯಂತೆ ಮಾರಾಟ ಆಗುತ್ತಿವೆ. ಹಗಲೆಲ್ಲಾ ಮಾರಾಟ ಮಾಡಿ ಬಸವಳಿದ ವ್ಯಾಪಾರಿಗಳು, ಸಂಜೆಯಾಗುತ್ತಿದ್ದಂತೆ ಸಿಕ್ಕಷ್ಟಕ್ಕೇ ಕೊಟ್ಟು ಗಾಡಿ ಖಾಲಿ ಮಾಡಿಕೊಂಡು ಹೋಗುತ್ತಾರೆ. ಕೈವ್ಯಾಪಾರಿಗಳು ಅಷ್ಟಿಷ್ಟು ಲಾಭ ಗಳಿಸಿ ಸಮಾಧಾನಪಟ್ಟುಕೊಂಡರೆ, ತೆರೆಮರೆ ಯಲ್ಲಿರುವ ಗುತ್ತಿಗೆದಾರರು, ಸಗಟು ವ್ಯಾಪಾರಿಗಳು ಮಾತ್ರ ಲಕ್ಷಾಂತರ ರೂ ಕಳೆದುಕೊಂಡು ಕೈಸುಟ್ಟುಕೊಂಡಿದ್ದಾರೆ.

ಪಟ್ಟಣದಲ್ಲಿ ಸುಮಾರು 50 ಮಾವಿನ ವ್ಯಾಪಾರಿಗಳಿದ್ದು, ಏನಿಲ್ಲವೆಂದರೂ, ್ಙ  15 ಕೋಟಿ ವಹಿವಾಟು ನಡೆಸಿದ್ದಾರೆ. ಇದರಲ್ಲಿ ಮುಸ್ಲಿಂ ವ್ಯಾಪಾರಿಗಳೇ ಹೆಚ್ಚಾಗಿದ್ದಾರೆ. ಕೆಲವರು ಮಾವಿನ ತೋಟಗಳನ್ನು ಗುತ್ತಿಗೆ ಮಾಡಿಕೊಂಡರೆ, ಮತ್ತೆ ಕೆಲವರು ಟನ್‌ಗಟ್ಟಲೆ ಮಾವು ಖರೀದಿಸಿ ತಂದಿದ್ದಾರೆ.

`ಉತ್ತಮ ಫಸಲು ಬಂದಿದ್ದರಿಂದ ಬೆಲೆ ಕುಸಿದಿದೆ. ನಾವು ರೂ 40 ಲಕ್ಷದ ಗುತ್ತಿಗೆ ಮಾಡಿದ್ದು, ಕೇವಲ ್ಙ  15 ಲಕ್ಷ ಸಿಕ್ಕಿದೆ. ತೋತಾಪುರಿ ರೂ 2ಕ್ಕೆ ಕೆಜಿ ಮಾರಾಟ ಆಗುತ್ತಿರುವುದರಿಂದ ಅದನ್ನು ಕೀಳದೇ ಮರದಲ್ಲೇ ಬಿಟ್ಟಿದ್ದೇವೆ.

 ಹತ್ತು ಕೆಜಿಯ ಒಂದು ಬಾಕ್ಸ್ ್ಙ 175 ಮಾರಾಟವಾಗುತ್ತಿದ್ದು, ಖಾಲಿ ಬಾಕ್ಸ್, ಬಾಡಿಗೆ, ಕೂಲಿಯ ಹಣವೂ ಸಿಗುತ್ತಿಲ್ಲ. ಪುಣೆ, ಬಾಂಬೆ ಮತ್ತಿತರ ಕಡೆ ಮಾವು ತೆಗೆದುಕೊಂಡು ಹೋಗಿ ಬಸ್ ಚಾರ್ಜ್‌ಗೆ ಹಣವಿಲ್ಲದಂತೆ ಬಂದಿದ್ದೇವೆ~ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಮಾವಿನ ಗುತ್ತಿಗೆದಾರ ಸಯ್ಯದ್ ಜಾವೀದ್.

`ಸುಮಾರು 50 ಟನ್ ಹಣ್ಣು ಮಾರಿದ್ದೇನೆ. ಕಾಯಿ ಕೀಳುವವರಿಗೆ ದಿನಕ್ಕೆ ್ಙ 400 ಕೊಡಬೇಕು. ತೋಟ ಕಾಯಲು ತಿಂಗಳಿಗೆ ಮೂರು ಸಾವಿರ, ಊಟ ಕೊಡಬೇಕು. ಇನ್ನು ಕಾಯಿ ತಂದು ಹಣ್ಣು ಮಾಡುವ ಹೊತ್ತಿಗೆ ಸಾವಿರಾರು ರೂಪಾಯಿ ಖರ್ಚಾಗಿರುತ್ತದೆ. ಲೆಕ್ಕ ಹಾಕಿದರೆ ನಮಗೆ ಒಂದು ಕೆಜಿಗೆ ್ಙ  20 ಬೀಳುತ್ತದೆ. ಆದರೆ, ಈಗ ನಾವು ಕೊಡುತ್ತಿರುವುದು ್ಙ  5ಕ್ಕೆ ಕೆಜಿ. ತೂಕ ಮಾಡಲೂ ಬೇಜಾರಾಗಿ ್ಙ  10ಕ್ಕೆ ಪುಟ್ಟಿಯಂತೆ ಕೊಡುತ್ತಿದ್ದೇವೆ.

ಕೆಲವು ಕಡೆ ತೋಟದವರಿಗೆ ಸಾವಿರಾರು ರೂ ಮುಂಗಡ ಹಣ ಕೊಟ್ಟಿದ್ದು, ಹಣ್ಣು ಕೀಳಲು ಹೋಗಿಲ್ಲ. ಬಡ್ಡಿಯಂತೆ ಸಾಲ ತಂದು ವ್ಯವಹಾರ ಮಾಡಿ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವೆ~ ಎಂದು ನೋವು ತೋಡಿಕೊಳ್ಳುತ್ತಾರೆ ವ್ಯಾಪಾರಿಗಳಾದ ಜಾನಿ, ಚೋಟಾ ಸಾಬ್, ಷಫೀ ಉಲ್ಲಾ, ಅಜೀಜ್ ಸಾಬ್, ಕಿಝರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT