ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಟೇಜ್‌ ಕ್ವಿಜ್‌: ಅತ್ತಾವರ ಶಾಲೆ ಸೆಮಿಫೈನಲ್‌ಗೆ

Published 12 ಡಿಸೆಂಬರ್ 2023, 6:58 IST
Last Updated 12 ಡಿಸೆಂಬರ್ 2023, 6:58 IST
ಅಕ್ಷರ ಗಾತ್ರ

ಮಂಗಳೂರು: ನಗರದ ಅತ್ತಾವರ ಮಣಿಪಾಲ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್‌ಇ ನಡೆಸುವ ಹೆರಿಟೇಜ್‌ ಇಂಡಿಯಾ 2023 ರಸಪ್ರಶ್ನೆ ಸ್ಪರ್ಧೆಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಬೆಂಗಳೂರಿನ ಎಂ.ಎಸ್‌ ರಾಮಯ್ಯ ವಿದ್ಯಾನಿಕೇತನದಲ್ಲಿ ಇತ್ತೀಚೆಗೆ ನಡೆದ ಪ್ರಾದೇಶಿಕ ಸುತ್ತಿನ ಸ್ಪರ್ಧೆಯಲ್ಲಿ ಮಣಿಪಾಲ ಶಾಲೆ ಅಗ್ರಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆಯಿತು.

ದೇಶದ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 2001ರಿಂದ ಹೆರಿಟೇಜ್‌ ಕ್ವಿಜ್‌ ನಡೆಯುತ್ತಿದೆ. ದೇಶದಾದ್ಯಂತ 2300ಕ್ಕೂ ಹೆಚ್ಚು ಶಾಲೆಗಳು ಈ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುತ್ತಿವೆ. ಈ ವರ್ಷ ಭಾರತ ಜಿ–20ಯ ಅಧ್ಯಕ್ಷತೆ ವಹಿಸಿದ್ದರ ಗೌರವಾರ್ಥ ‘ಭಾರತ: ಪ್ರಜಾಪ್ರಭುತ್ವದ ತಾಯಿ’ ವಿಷಯದ ಕುರಿತು ಸ್ಪರ್ಧೆ ನಡೆಯುತ್ತಿದೆ.

ಸ್ನೇಹಜ್‌ ಶ್ರೀನಿವಾಸ್ ಕ್ವಿಜ್‌ಮಾಸ್ಟರ್ ಆಗಿದ್ದರು. ಇರಾ ಜೈನ್, ರಿಷಬ್ ನಾಯಕ್ ಹಾಗೂ ಆಸ್ಟಿನ್ ಥಾಮಸ್ ಅವರು ಮಣಿಪಾಲ ಶಾಲೆಯನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT