ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿಗೆ ದಾಮೋದರ ಶೆಟ್ಟಿ ಆಯ್ಕೆ

Published 4 ಜನವರಿ 2024, 4:41 IST
Last Updated 4 ಜನವರಿ 2024, 4:41 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬೈಕಾಡಿ ಪ್ರತಿಷ್ಠಾನ ನೀಡುವ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿಗೆ ವಿಮರ್ಶಕ, ನಾಟಕಕಾರ ನಾ. ದಾಮೋದರ ಶೆಟ್ಟಿ ಆಯ್ಕೆಯಾಗಿದ್ದಾರೆ.

ನಗರದ ಪುರಭವನದಲ್ಲಿ ಜ.5ರಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಭರತ್ ರಾಜ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ, ವಕೀಲ ಶಶಿರಾಜ್ ರಾವ್ ಕಾವೂರು, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ವಿಶೇಷ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ನಂತರ ಸು.ವಿ.ಕಾ ಕೋಟ ಅವರ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ, ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ಜರಗಲಿದೆ ಎಂದರು. ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಜೆ.ಬೈಕಾಡಿ, ಟ್ರಸ್ಟಿ ರೇಖಾ ಬಿ.ಬೈಕಾಡಿ ಇದ್ದರು.

ಬೈಕಾಡಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆ ‘ವಾಗ್ಮಿ’ಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು: ತರುಣ ವಿಭಾಗದಲ್ಲಿ ಆದಿತ್ಯ ಆಚಾರ್ಯ ಮಂಗಳೂರು, ಶರಣ್ಯ ತಂತ್ರಿ ನಂದಳಿಕೆ, ಅವನಿ ಕೆ ಸುಳ್ಯ, ಯುವ ವಿಭಾಗದಲ್ಲಿ ಶಾಹಿದ್ ಆಫ್ರೀದ್ ಬೆಳ್ತಂಗಡಿ, ಪುನೀತ್ ಕುಮಾರ್ ಎಂ.ಬಿ ಮೈಸೂರು, ಸಮ್ಯಕ್ತ್ ಜೈನ್ ಕಡಬ, ಸಾರ್ವಜನಿಕರ ವಿಭಾಗದಲ್ಲಿ ನಯನಾ ಕಡಬ, ಸ್ಮಿತಾ ಬಿ. ರಾವ್ ಮಂಗಳೂರು, ಸಂತೋಷ್‌ ಕುಮಾರ್ ಕೊಡಗು ಮತ್ತು ನಿವೇದಿತಾ ಎಚ್ ಮಂಗಳೂರು.

ಆನ್‌ಲೈನ್ ಕನ್ನಡ ಕಥಾ ಸ್ಪರ್ಧೆ ವಿಜೇತರು: 3ರಿಂದ 5 ವರ್ಷ ವಿಭಾಗದಲ್ಲಿ ಚಾರ್ವಿ ಸಿ. ರಾವ್ ಬೆಂಗಳೂರು, ಸುಷುಪ್ತಿ ಕೆ.ಎಂ. ಬಂಟ್ವಾಳ, ಅನೇಕ ಸಾಲಿಯಾನ್ ಕುಂದಾಪುರ, 5ರಿಂದ 9 ವರ್ಷ ವಿಭಾಗದಲ್ಲಿ ಗಾರ್ಗಿ ಭಟ್ ತುಮಕೂರು, ಆರ್ಯ ಭಟ್ ತುಮಕೂರು, ಧ್ವನಿ ಕೆ ಕುಂದಾಪುರ, 9ರಿಂದ 13 ವರ್ಷ ವಿಭಾಗದಲ್ಲಿ ದಕ್ಷ್ ಕೋಟೆ ಬೆಂಗಳೂರು, ಅಪೂರ್ವ ಮೂಲ್ಕಿ, ಪರೀಕ್ಷಿತ ಐತಾಳ್ ಕುಂದಾಪುರ ಮತ್ತು ವಿಧಾತ್ರಿ ರವಿಶಂಕರ್ ಕುಂದಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT