ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಪೆ: ದನ ಕಳವು ಮಾಡುತ್ತಿದ್ದ ಇಬ್ಬರ ಬಂಧನ

Published 9 ಫೆಬ್ರುವರಿ 2024, 13:58 IST
Last Updated 9 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಬಜಪೆ: ದನ ಕಳವು ಮಾಡುತ್ತಿದ್ದ ಇಬ್ಬರನ್ನು ಬಜಪೆ ಹಾಗೂ ಮೂಡುಬಿದಿರೆ ಪೊಲೀಸರು  ಬಂಧಿಸಿದ್ದು ಒಬ್ಬ ಪರಾರಿಯಾಗಿದ್ದಾನೆ. ಮೂಡುಬಿದಿರೆಯ ಕೊಡಂಗಲ್ ನಿವಾಸಿ ಮೊಹಮ್ಮದ್ ಶರೀಫ್ (23) ಹಾಗೂ ಮೂಡುಬಿದಿರೆ ಹಿದಾಯತ್ ನಗರ ತೋಡಾರು ನಿವಾಸಿ ಹಸೈನಾರ್ (28) ಬಂಧಿತರು. ಹಂಝಾ ಪರಾರಿಯಾಗಿದ್ದಾನೆ.

ಫೆ.8ರಂದು ಬೆಳಿಗ್ಗೆ ಬಿಳಿ ಬಣ್ಣದ ಕಾರು ಮುಚ್ಚೂರು ಕ್ರಾಸ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಅವರಿಗೆ ಬಂದ ಮಾಹಿತಿಯಂತೆ ಪಿಎಸ್‌ಐ ರೇವಣಸಿದ್ದಪ್ಪ ಹಾಗೂ ಸಿಬ್ಬಂದಿ ವಾಹನ ತಡೆದಾಗ ಒಬ್ಬ ಪರಾರಿಯಾಗಿದ್ದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ₹ 5 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.

ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್ ಮತ್ತು ಮೂಡುಬಿದಿರೆ ಠಾಣೆ ನಿರೀಕ್ಷಕ ಸಂದೇಶ್ ನೇತೃತ್ವದಲ್ಲಿ ಬಜಪೆ ಠಾಣೆ ಪಿಎಸ್‌ಐ ರೇವಣ ಸಿದ್ದಪ್ಪ  ಗುರಪ್ಪ ಕಾಂತಿ, ಕುಮಾರೇಶನ್ ಎಎಸ್‌ಐ ರಾಮ ಪೂಜಾರಿ ಮೇರಮಜಲು, ಸುಜನ, ರಶೀದ್ ಶೇಕ್, ದೇವಪ್ಪ ಹೊಸಮನಿ, ಮಂಜುನಾಥ, ಬಸವರಾಜ್ ಪಾಟೀಲ್, ಕೆಂಚನಗೌಡ, ಗುರುಪ್ರಸಾದ್ ಆನಂದ ಮಧು ವೈ, ಪ್ರಕಾಶ್ ಗೌಡ, ಈರಣ್ಣ, ಪ್ರೇಮ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ದನ
ದನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT