ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟೋರಿ: ಸಂಧ್ಯಾ ಭಜನೆಗೆ ಚಾಲನೆ

Published 11 ಡಿಸೆಂಬರ್ 2023, 8:35 IST
Last Updated 11 ಡಿಸೆಂಬರ್ 2023, 8:35 IST
ಅಕ್ಷರ ಗಾತ್ರ

ಮುಡಿಪು: ಕೊಣಾಜೆ ಪಟ್ಟೋರಿಯ ಶ್ರೀನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ‌ ನಾಗಬ್ರಹ್ಮ ಅರಸು ಉಳ್ಳಾಲ್ತಿ ಮಾಡದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ, ಲೋಕಕಲ್ಯಾಣಾರ್ಥವಾಗಿ ಡಿ.26ವರೆಗೆ ನಡೆಯಲಿರುವ ಸಂಧ್ಯಾ ಭಜನೆ ಸಂಕೀರ್ತನೆಗೆ ಚಾಲನೆ ನೀಡಲಾಯಿತು.

ಸತ್ಯನಾರಾಯಣ ಭಟ್ ಕೊಣಾಜೆ ಬೀಡು, ವೆಂಕಪ್ಪ ಕಾಜವ ಪಟ್ಟೋರಿ, ಶ್ರೀನಿವಾಸ ಕಾಜವ ಪಟ್ಟೋರಿ, ದಿವಾಕರ ಭಂಡಾರಿ ಪಟ್ಟೋರಿ, ಸಂತೋಷ್ ಶೆಟ್ಟಿ ಫುಲ್ಲು, ಕಲ್ಪನಾ ಕರುಣಾಕರ ಕಾನ, ರೇಖಾ ಬಂಟು ಕೆ.ಕಾಟುಕೋಡಿ, ಉಮಾವತಿ ಕೃಷ್ಣಪ್ಪ ಕೆ.ಕೆ.ಎಸ್., ಬೂಬಣ್ಣ ಫುಲ್ಲು, ರೇವತಿ ಚಂದ್ರಶೇಖರ ಕಾಟುಕೋಡಿ, ಲೋಲಾಕ್ಷಿ ವಸಂತ ಕಾಟುಕೋಡಿ ಭಾಗವಹಿಸಿದ್ದರು.

ಕೃಷ್ಣಪ್ಪ ಕೆ.ಕೆ.ಎಸ್., ದೇವದಾಸ್ ಕಲಾಯಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಸುಬ್ಬಣ್ಣ ಭಟ್ ಪೂಜಾ ವಿಧಿವಿದಾನ ನೆರವೇರಿಸಿದರು.
ನಾಗಬ್ರಹ್ಮ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ,‌ ಕಾರ್ಯದರ್ಶಿ ರಾಜೇಶ್ ಕಾನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT