ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರ್ಲದಲ್ಲಿ ಬಿಜೆಪಿ ಯುವ ಸಮಾವೇಶ

Published 27 ಫೆಬ್ರುವರಿ 2024, 12:46 IST
Last Updated 27 ಫೆಬ್ರುವರಿ 2024, 12:46 IST
ಅಕ್ಷರ ಗಾತ್ರ

ಬದಿಯಡ್ಕ: ‘ಬಿಜೆಪಿಯಿಂದ ಮಾತ್ರ ಕೇರಳದ ಸಮಗ್ರ ಅಭಿವೃದ್ಧಿ ಸಾಧ್ಯ. ಕೇರಳಿಗರೂ ಕೇಂದ್ರ ಸರ್ಕಾರದ ಫಲಾನುಭವಿಗಳಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದಿಂದ ಭಾರತೀಯರು ಜಗತ್ತಿನಲ್ಲೇ ಹೆಮ್ಮೆ ಪಡುವಂತಾಗಿದೆ’ ಎಂದು ಬಿಜೆಪಿ ಕೇರಳ ರಾಜ್ಯ ಘಟಕದ ವಕ್ತಾರ ಸಂದೀಪ್ ವಾರಿಯರ್ ಹೇಳಿದರು.

ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಪೆರ್ಲದಲ್ಲಿಕ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

ಎಣ್ಮಕಜೆ ಗ್ರಾಮ ಪಂಚಾಯಿತಿ ಬಿಜೆಪಿ ಸಮಿತಿ ಅಧ್ಯಕ್ಷ ಎ.ಸಿ.ಸುಮಿತ್ ರಾಜ್ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ನಾರಾಯಣ ನಾಯ್ಕ ಅಡ್ಕಸ್ಥಳ, ಬಟ್ಟು ಶೆಟ್ಟಿ, ಕೆ.ಪಿ.ಅನಿಲ್ ಕುಮಾರ, ಅವಿನಾಶ ಕಾರಂತ ಭಾಗವಹಿಸಿದ್ದರು.

ಸುರೇಂದ್ರನ್ ಮಣಿಯಂಪಾರೆ ಸ್ವಾಗತಿಸಿದರು. ಎಚ್.ಇಂದಿರಾ ವಂದಿಸಿದರು. ಪುನೀತ್ ಕುತ್ತಾಜೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT