ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಜುಲೇಖಾದಲ್ಲಿ ಅಸ್ಥಿಮಜ್ಜೆ ಕಸಿ ಯಶಸ್ವಿ

Published 29 ನವೆಂಬರ್ 2023, 7:34 IST
Last Updated 29 ನವೆಂಬರ್ 2023, 7:34 IST
ಅಕ್ಷರ ಗಾತ್ರ

ಮಂಗಳೂರು: ಜುಲೇಖಾ ಯೆನೆಪೋಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೈಗೆಟುಕುವ ದರದಲ್ಲಿ ಅಸ್ಥಿಮಜ್ಜೆಯ ಕಸಿ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಂಸ್ಥೆಯ ಹಿರಿಯ ಆಂಕಾಲಜಿಸ್ಟ್ ಡಾ. ರಾಜೇಶ್ ಕೃಷ್ಣ ಮಂಗಳವಾರ ಇಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜುಲೇಖಾ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸ್ವ- ಅಸ್ಥಿಮಜ್ಜೆ (ಆಟೋಲೋಗಸ್) ಮತ್ತು ಪರ ಮೂಲದ (ಅಲೋಜೆನಿಕ್) ಅಸ್ಥಿಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಮೈಲಾಯ್ಡ್ ಲ್ಯುಕೇಮಿಯಾದಿಂದ ಬಳಲುತ್ತಿದ್ದ 40 ವರ್ಷದ ರೋಗಿಗೆ ಚಿಕಿತ್ಸೆ ನೀಡಲು ನಿರ್ಧರಿಸಿದಾಗ, ಅಸ್ಥಿಮಜ್ಜೆ ಪೂರ್ಣ ಹೊಂದಾಣಿಕೆಯಾಗುವ ದಾನಿಗಳು ಸಿಗದ ಕಾರಣ, ಸಹೋದರನಿಂದ ಅರ್ಧ ಹೊಂದಾಣಿಕೆಯ (ಹ್ಯಾಪ್ಲೊ-ಐಡೆಂಟಿಕಲ್) ಕಸಿ ಮಾಡಲಾಯಿತು. ದಾನಿಯು ಭಿನ್ನ ರಕ್ತದ ಗುಂಪನ್ನು ಹೊಂದಿದ್ದರಿಂದ ಅನೇಕ ಸವಾಲುಗಳು ಇದ್ದವು. ಚಿಕಿತ್ಸೆ ಪೂರ್ಣಗೊಂಡು ಆರು ತಿಂಗಳು ಕಳೆದಿದ್ದು, ರೋಗಿ ಚೇತರಿಸಿಕೊಂಡಿದ್ದಾರೆ ಎಂದರು.

ಇನ್ನೊಂದು ಪ್ರಕರಣದಲ್ಲಿ ಮೈಲಾಯ್ಡ್ ಲ್ಯುಕೇಮಿಯಾದಿಂದ ಬಳಲುತ್ತಿದ್ದ 14 ವರ್ಷದ ರೋಗಿಗೆ ಸಂಪೂರ್ಣ ಹೊಂದಾಣಿಕೆ ಆಗುವ ಅಸ್ಥಿಮಜ್ಜೆಯನ್ನು ಅವರ ಸಹೋದರಿಯಿಂದ ಪಡೆದು ಈ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆ ಮುಗಿದು ಮೂರು ತಿಂಗಳುಗಳಾಗಿದ್ದು, ಮಗು ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖವಾಗಿದೆ. ಬಡ ಕುಟುಂಬದ ಹಿನ್ನೆಲೆ ಹೊಂದಿದ್ದ ಮಗುವಿನ ಚಿಕಿತ್ಸೆಗೆ ಕ್ರೌಡ್ ಫಂಡಿಂಗ್ ಮೂಲ ಹಣ ಸಂಗ್ರಹಿಸಿದ್ದು, ₹ 35 ಲಕ್ಷ ತಗಲುವ ಚಿಕಿತ್ಸೆಯನ್ನು ₹12 ಲಕ್ಷದಲ್ಲಿ ಮಾಡಲಾಗಿದೆ ಎಂದರು.

ಪ್ರಮುಖರಾದ ಡಾ. ಅನುಷಾ ಹೆಗಡೆ, ಡಾ. ಇಂದಿರಾ ಪುತ್ರನ್, ಡಾ. ದಿನೇಶ್ ಎಂ., ಡಾ. ಶಿಲ್ಪಾ ಭಟ್, ಡಾ. ಬೋನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT