ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್ ಬಿರುಸಿನ ಪ್ರಚಾರ

ವಿದ್ಯಾಸಂಸ್ಥೆ, ಸ್ಮಾರಕಕ್ಕೆ ಪದ್ಮರಾಜ್ ಭೇಟಿ; ಕಾರ್ಮಿಕರ ಜೊತೆ ಬೃಜೇಶ್ ಮಾತುಕತೆ
Published 6 ಏಪ್ರಿಲ್ 2024, 5:44 IST
Last Updated 6 ಏಪ್ರಿಲ್ 2024, 5:44 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ–ಕಾಂಗ್ರೆಸ್‌ ಅಭ್ಯರ್ಥಿಗಳು ಶುಕ್ರವಾರ ವಿವಿಧ ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿಯ ಕ್ಯಾಪ್ಟನ್ ಬೃಜೇಶ್ ಚೌಟ ಬಂಟ್ವಾಳ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಾಗಿದರೆ, ಕಾಂಗ್ರೆಸ್ ಪಕ್ಷದ ಪದ್ಮರಾಜ್ ಆರ್‌ ಅವರು ನಗರದ ಅನೇಕ ಕಡೆಗಳಲ್ಲಿ ಹಲವರನ್ನು ಭೇಟಿ ಮಾಡಿದರು.

ಸೇಂಟ್ ಅಲೋಶಿಯಸ್‌ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಪದ್ಮರಾಜ್ ಪ್ರಾಂಶುಪಾಲ ಫಾದರ್ ಪ್ರವೀಣ್ ಮಾರ್ಟಿಸ್ ಜೊತೆ ಮಾತುಕತೆ ನಡೆಸಿದರು. ಕುಂಬೋಳ್ ಸಯ್ಯದ್ ಉಮ್ಮರ್ ಕುಂಞಿ ಕೋಯ ತಂಙಳ್ ಅವರನ್ನು ಭೇಟಿಯಾದರು. ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆಗೈದ ನಂತರ ತುಳುನಾಡ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದರು.

ಕ್ಯಾಪ್ಟನ್ ಬೃಜೇಶ್ ಚೌಟ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಕಲ್ಲಡ್ಕದ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದ ಅವರನ್ನು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬರಮಾಡಿಕೊಂಡರು. ನಂತರ ಬೃಜೇಶ್, ಮುಖಂಡ ರುಕ್ಮಯ ಪೂಜಾರಿ ಮನೆಗೆ ಭೇಟಿ ತೆರಳಿದರು.

ಕರಿಂಗಾನ ಶ್ರೀನಿವಾಸ ಕಾಮತ್ ಮತ್ತು ರಘು ಸಪಲ್ಯ ಮನೆಗೆ ತೆರಳಿ ಅಮ್ಟೂರು ಕಟ್ಟೆಮಾರು ಮಂತ್ರದೇವತೆ ಸನ್ನಿಧಾನಕ್ಕೆ ಭೇಟಿ ಕೊಟ್ಟರು. ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಬಂಟ್ವಾಳ ಪೇಟೆಯ ಅಂಚನ್ ಗಾರ್ಮೆಂಟ್ಸ್, ನೈನಾಡು ಹರೀಂದ್ರ ಪೈ ಅವರ ಗೇರುಬೀಜ ಫ್ಯಾಕ್ಟರಿ, ವಾಮದಪದವು ಶ್ರೀನಿವಾಸ ಇಂಡಸ್ಟ್ರೀಸ್‌ನಲ್ಲಿ ಕಾರ್ಮಿಕರ ಬಳಿ ಮಾತುಕತೆ ನಡೆಸಿದರು.

ಪಾರ್ಕ್‌ನಲ್ಲಿ ಸಾರ್ವಜನಿಕರ ಜೊತೆ ಪದ್ಮರಾಜ್ ಆರ್‌ ಮಾತನಾಡಿದರು
ಪಾರ್ಕ್‌ನಲ್ಲಿ ಸಾರ್ವಜನಿಕರ ಜೊತೆ ಪದ್ಮರಾಜ್ ಆರ್‌ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT