ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಅಡಿಕೆ: ಪ್ರಯೋಗಾಲಯ ಪರೀಕ್ಷೆಗೆ ಕ್ಯಾಂಪ್ಕೊ ಒತ್ತಾಯ

Published 23 ಫೆಬ್ರುವರಿ 2024, 14:05 IST
Last Updated 23 ಫೆಬ್ರುವರಿ 2024, 14:05 IST
ಅಕ್ಷರ ಗಾತ್ರ

ಮಂಗಳೂರು: ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು, ದೇಶೀ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿ ದೇಶದ ಅಡಿಕೆ ಮಾರುಕಟ್ಟೆಯನ್ನು ನಾಶಗೊಳಿಸುತ್ತಿದೆ ಎಂದು ಕ್ಯಾಂಪ್ಕೊ ಕಳವಳ ವ್ಯಕ್ತಪಡಿಸಿದೆ.

ಕ್ಯಾಂಪ್ಕೊದ ನಿರಂತರ ಪ್ರಯತ್ನದಿಂದ ಕೇಂದ್ರ ಸರ್ಕಾರ ಇತ್ತೀಚಿಗೆ ಕನಿಷ್ಠ ಆಮದು ಬೆಲೆಯನ್ನು ಕೆ.ಜಿ.ಯೊಂದಕ್ಕೆ ₹351 ನಿಗದಿಪಡಿಸಿತ್ತು. ಆದ,ರೆ ಅಕ್ರಮ ಅಮದು ಅಡಿಕೆಯನ್ನು ವಶಪಡಿಸಿಕೊಂಡ ಕಸ್ಟಮ್ಸ್‌, ಡಿಆರ್‌ಐ ಅಥವಾ ಸಂಬಂಧಪಟ್ಟ ಇಲಾಖೆಗಳು ನಡೆಸುವ ಹರಾಜಿನಲ್ಲಿ ಕನಿಷ್ಠ ಆಮದು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರು ಖರೀದಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇಂಡೊನೇಷ್ಯಾ, ಬರ್ಮಾ ಅಡಿಕೆಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ. ಅವು ಮನುಷ್ಯರ ಉಪಯೋಗಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ, ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.

ಕರ್ನಾಟಕದ 31 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ ರೈತರಿಗೆ ಅಡಿಕೆಯೇ ಜೀವನಾಧಾರವಾಗಿದೆ. ವಿದೇಶಿ ಅಡಿಕೆಯ ಒಳಹರಿವು ಈ ಭಾಗದ ರೈತರ ಜೀವನವನ್ನು ನರಕ ಸದೃಶಗೊಳಿಸಿದೆ. ಪ್ರಧಾನಿಯವರು ಮಧ್ಯಪ್ರವೇಶಿಸಿ, ನೆಲಕಚ್ಚಿರುವ ಮಾರುಕಟ್ಟೆ ಚೇತರಿಕೆ ಕಾಣುವಂತೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT