ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ ಕಳವು– ಆರೋಪಿಗಳಿಬ್ಬರ ಬಂಧನ

Published 25 ಫೆಬ್ರುವರಿ 2024, 4:34 IST
Last Updated 25 ಫೆಬ್ರುವರಿ 2024, 4:34 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬಜಾಲ್‌ನ ಜೆ.ಎಂ. ರಸ್ತೆಯಲ್ಲಿ ಬಳಿ ನಡೆದು ಹೋಗುತ್ತಿದ್ದ ಒಂಟಿ ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಿತ್ತು ಪರಾರಿಯಾದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 16 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಬಿ.ಮೂಡಾ ಗ್ರಾಮದ ಮಿತ್ತಬೈಲ್‌ ನಿವಾಸಿ ಮೊಹಮ್ಮದ್ ಅಲಿ ಅಲಿಯಾಸ್‌ ಅಶ್ರು (32 ವರ್ಷ) ಹಾಗೂ ಇದೇ ಗ್ರಾಮದ ಶಾಂತಿ ಅಂಗಡಿ ನಿವಾಸಿ ಜುಬೇರ್ (32 ) ಬಂಧಿತರು. ಅವರಿಂದ ವಶಪಡಿಸಿಕೊಂಡ ಚಿನ್ನದ ಸರದ ಮೌಲ್ಯ ₹ 90 ಸಾವಿರ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಆರೋಪಿ ಮೊಹಮ್ಮದ್ ಅಲಿ ವಿರುದ್ದ ಕಳವು, ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸೇರಿ 15 ಪ್ರಕರಣಗಳುದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ, ಬರ್ಕೆ ಠಾಣೆಗಳಲ್ಲಿ ಹಾಗೂ ಕೇರಳದ ಬದಿಯಡ್ಕ, ಮಂಜೇಶ್ವರ ಠಾಣೆಗಳಲ್ಲಿ ದಾಖಲಾಗಿವೆ.

ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಶಿವಕುಮಾರ್, ಅನಿತಾ ನಿಕ್ಕಂ, ಎಎಸ್ಐ ವೆಂಕಟೇಶ್, ಚಂದ್ರಶೇಖರ ಮತ್ತು ಸಿಬ್ಬಂದಿ ಜಯಾನಂದ, ಕುಶಾಲ್ ಹೆಗ್ಡೆ, ದೀಪಕ್ ಕೊಟ್ಯಾನ್, ರಾಜೇಶ್ ಕೆ.ಎನ್, ರಾಘವೇಂದ್ರ, ಸಂತೋಷ್ ಮಾದರ್ ಮತ್ತು ಪ್ರವೀಣ್  ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT