ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ: ನಾಳೆ ಸೈಕಲ್ ರ್‍ಯಾಲಿ

Published 6 ಏಪ್ರಿಲ್ 2024, 5:47 IST
Last Updated 6 ಏಪ್ರಿಲ್ 2024, 5:47 IST
ಅಕ್ಷರ ಗಾತ್ರ

ಮೂಡುಬಿದಿರೆ: ಟೆಂಪಲ್ ಟೌನ್ ಮೂಡುಬಿದಿರೆ ಮತ್ತು ವಿವಿಧ ಕ್ಲಬ್‌ಗಳ ವತಿಯಿಂದ ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಕಾರದೊಂದಿಗೆ ‘ವಿಶ್ವ ಆರೋಗ್ಯ ದಿನಾಚರಣೆ’ ‘ಸೈಕ್ಲಿಂಗ್‌ ಫಾರ್ ಗ್ರೀನ್ ಆಂಡ್ ಹೆಲ್ತಿ ಮೂಡುಬಿದಿರೆ’ ಧೇಯದೊಂದಿಗೆ ಏ.7ರಂದು ಮೂಡುಬಿದಿರೆಯಲ್ಲಿ ಸೈಕಲ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಟರಾಕ್ಟ್‌ ಕ್ಲಬ್ ಅಧ್ಯಕ್ಷ ಫರಾಝ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಡಗಬಸದಿ ಸಮೀಪದ ಫಾರ್ಚೂನ್‌ ಹೈವೆ ಕಟ್ಟಡದ ಬಳಿಯಿಂದ ಹೊರಟು, ಅಲಂಗಾರ್ ಜಂಕ್ಷನ್‌, ವರ್ತುಲ ರಸ್ತೆ, ಸ್ವರಾಜ್ಯ ಮೈದಾನ, ನಿಶ್ಮಿತಾ ಟವರ್ಸ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಹಾದು ಜೈನ್ ಹೈಸ್ಕೂಲ್ ಮೂಲಕ ಫಾರ್ಚೂನ್‌ ಹೈವೆ ಕಟ್ಟಡ ಬಳಿ ರ್‍ಯಾಲಿ ಪೂರ್ಣಗೊಳ್ಳಲಿದೆ. ಸುಮಾರು 5 ಕಿ.ಮೀ ವ್ಯಾಪ್ತಿಯೊಳಗೆ ರ್‍ಯಾಲಿ ನಡೆಯಲಿದೆ ಎಂದರು.

ಭಾಗವಹಿಸಿದವರಿಗೆ ಲಕ್ಕಿ ಡ್ರಾ ಮೂಲಕ ಸೈಕಲ್‌ ಅನ್ನು ಬಹುಮಾನವಾಗಿ ನೀಡಲಾಗುವುದು. ಡಾ.ರಮೇಶ್ ಕುಮಾರ್ ರ್‍ಯಾಲಿಗೆ ಚಾಲನೆ ನೀಡುವರು. ಡಾ.ವಿನಯ ಆಳ್ವ ಸಮಾರೋಪದಲ್ಲಿ ಭಾಗವಹಿಸುವರು ಎಂದರು.

ಸ್ಟಾರ್ ರೈಡರ್ಸ್‌ನ ರೀವನ್ ಸಿಕ್ವೇರ ಸುದ್ದಿಗೋಷ್ಠಿಯಲ್ಲಿದ್ದರು. ಮಾಹಿತಿಗೆ ಫರಾಝ್ (8095239231) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT