ಪೈಲೆಟ್‌ ಅಸ್ವಸ್ಥ: ಮಂಗಳೂರು-ದುಬೈ ವಿಮಾನ ವಿಳಂಬ

7

ಪೈಲೆಟ್‌ ಅಸ್ವಸ್ಥ: ಮಂಗಳೂರು-ದುಬೈ ವಿಮಾನ ವಿಳಂಬ

Published:
Updated:

ಮಂಗಳೂರು: ಪೈಲೆಟ್‌ ಅಸ್ವಸ್ಥಗೊಂಡಿದ್ದರಿಂದ ಮಂಗಳವಾರ ರಾತ್ರಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಬೇಕಿದ್ದ ಸ್ಪೈಸ್‌ ಜೆಟ್‌ ವಿಮಾನ ಸಂಚಾರದಲ್ಲಿ ವಿಳಂಬವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು.

ಪೈಲೆಟ್‌ಗೆ ಆರೋಗ್ಯ ಸಮಸ್ಯೆ ಉಂಟಾದ ಕಾರಣ ವಿಮಾನದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಮಂಗಳವಾರದ ಬದಲು ಬುಧವಾರ ಸಂಜೆ 5 ಗಂಟೆಗೆ ಮಂಗಳೂರಿನಿಂದ ದುಬೈಗೆ ಪ್ರಯಾಣ ಬೆಳೆಸಿತು.

‘ಮಂಗಳವಾರ ಮಧ್ಯರಾತ್ರಿ 12.45 ಕ್ಕೆ ಈ ವಿಮಾನ ಮಂಗಳೂರಿನಿಂದ ಪ್ರಯಾಣ ಆರಂಭಿಸಬೇಕಿತ್ತು. ಆದರೆ, ಪೈಲೆಟ್‌ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೇ ಅವರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಮಲೇರಿಯಾ ಪತ್ತೆಯಾಗಿದೆ. ಹೀಗಾಗಿ ಈ ವಿಮಾನದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಯಿತು. ಇದರಿಂದಾಗಿ ತೊಂದರೆಗೆ ಒಳಗಾದ 188 ಮಂದಿ ಪ್ರಯಾಣಿಕರಿಗೆ ಸಮೀಪದ ಹೋಟೆಲ್‌ಗಳಲ್ಲಿ ವಾಸ್ತವ್ಯ ಕಲ್ಪಿಸಲಾಯಿತು’ ಎಂದು ಸ್ಪೈಸ್‌ ಜೆಟ್‌ ವಕ್ತಾರರು ತಿಳಿಸಿದ್ದಾರೆ.

ಬಾಡಿಗೆ ಪಡೆದಿರುವ ಕೊರೆಂಡನ್‌ ಏರ್‌ಲೈನ್ಸ್‌ನ ಪೈಲೆಟ್‌ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ವಿಮಾನದ ವೇಳಾಪಟ್ಟಿ ಪರಿಷ್ಕರಿಸುವುದು ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !