ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು | ಮನೆ ಕೆಡವಿ, ಸ್ವತ್ತು ನಾಶ: ಮೂವರ ವಿರುದ್ಧ ಪ್ರಕರಣ

Published 10 ಮಾರ್ಚ್ 2024, 13:55 IST
Last Updated 10 ಮಾರ್ಚ್ 2024, 13:55 IST
ಅಕ್ಷರ ಗಾತ್ರ

ಪುತ್ತೂರು: ವಾಸ್ತವ್ಯದ ಮನೆಯನ್ನು ಜೆಸಿಬಿ ಮೂಲಕ ಕೆಡವಿ ಮನೆಯ ವಸ್ತುಗಳನ್ನು ನಾಶಪಡಿಸಿ ನಷ್ಟವುಂಟು ಮಾಡಿದ ಘಟನೆ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಹೊಸಮಾರು ಎಂಬಲ್ಲಿ ನಡೆದಿದ್ದು, ಘಟನೆಯ ಕುರಿತು ಸಂಪ್ಯ ಠಾಣೆಗೆ ದೂರು ನೀಡಲಾಗಿದೆ. ಜಾಗದ ತಕರಾರಿನ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ.

ಕುರಿಯ ಗ್ರಾಮದ ಹೊಸಮಾರು ನಿವಾಸಿ, ಪುತ್ತೂರಿನ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿ ಹೋಟೆಲ್ ವ್ಯವಹಾರ ನಡೆಸುತ್ತಿರುವ ವಸಂತ ಪೂಜಾರಿ ಅವರು ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

‘ನಮ್ಮ ಸ್ವಾಧೀನದಲ್ಲಿರುವ ಜಾಗಕ್ಕೆ ಸೂತ್ರಬೆಟ್ಟು ನಿವಾಸಿ ಶಶಿಕಲಾ ರೈ ಅವರ ಪುತ್ರ ಉಜ್ವಲ್ ರೈ ಅಕ್ರಮವಾಗಿ ಪ್ರವೇಶಿಸಿ, ನಾನು ಮತ್ತು ಪತ್ನಿ ವಾಸ್ತವ್ಯವಿದ್ದ ಹೆಂಚಿನ ಸೂರಿನ ಮನೆಯನ್ನು ಜೆಸಿಬಿ ಮೂಲಕ ಕೆಡವಿದ್ದಾರೆ. ₹ 2.35 ಲಕ್ಷ ಮೌಲ್ಯದ ಚಿನ್ನಾಭರಣ, ಮನೆಯ ವಸ್ತುಗಳು, ಬಟ್ಟೆ ಸಹಿತ ಲಕ್ಷಾಂತ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ನಾಶ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಪತ್ನಿ ಜಯಮಾಲಾ ಹೆಸರಿನಲ್ಲಿ ಒಪ್ಪಂದದ ಮೂಲಕ ಸೂತ್ರಬೆಟ್ಟು ನಿವಾಸಿ ಶಶಿಕಲಾ ರೈ ಅವರಿಂದ ಜಾಗವನ್ನು ಖರೀದಿಸಿದ್ದು, ಪ್ರಸ್ತುತ ಮನೆಯು ಪತ್ನಿ ಜಯಮಾಲಾ ಹೆಸರಿನಲ್ಲಿದ್ದು, ನಮ್ಮ ಸ್ವಾಧೀನದಲ್ಲಿದೆ. ಈ ನಡುವೆ ನಮಗೆ ಮತ್ತು ಶಶಿಕಲಾ ಅವರಿಗೆ ಜಾಗದ ವಿಚಾರದಲ್ಲಿ ತಕರಾರು ಉಂಟಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಪತ್ನಿ ಜಯಮಾಲಾ ಅವರು ಅನಾರೋಗ್ಯದಿಂದ ಪಂಜದಲ್ಲಿರುವ ತವರು ಮನೆಗೆ ಹೋಗಿದ್ದು, ಈ ಮಧ್ಯೆ ಮಾರ್ಚ್‌ 9ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿಗಳು ಮನೆಯನ್ನು ಕೆಡವಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ವಸಂತ ಪೂಜಾರಿ ಅವರು ಶಶಿಕಲಾ ರೈ, ಆಕೆಯ ಪುತ್ರ ಉಜ್ವಲ್ ರೈ ಮತ್ತು ಜೆಸಿಬಿ ಆಪರೇಟರ್ ವಿರುದ್ಧ ದೂರು ನೀಡಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT