ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ವ್ಯಾಪಾರದ ಜೊತೆ ನೈತಿಕತೆ ಇರಲಿ’

Published 26 ಜನವರಿ 2024, 6:40 IST
Last Updated 26 ಜನವರಿ 2024, 6:40 IST
ಅಕ್ಷರ ಗಾತ್ರ

ಮಂಗಳೂರು: ಕೃಷಿ ಪರಿಕರ ಮಾರಾಟಗಾರರು ವ್ಯಾಪಾರದ ಜೊತೆಗೆ ನೈತಿಕತೆ ಹೊಂದಿರಬೇಕು. ಪ್ರಮಾಣಪತ್ರಕ್ಕಾಗಿ ಮಾತ್ರವಲ್ಲದೆ ಜ್ಞಾನಕ್ಕಾಗಿ ದೇಸಿ ಕೋರ್ಸ್‌ಗಳ ತರಬೇತಿ ಪಡೆಯುವುದು ಅವಶ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಎಚ್ ಹೇಳಿದರು.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್-ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಹೈದ್ರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಬುಧವಾರ ಇಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರಿಗೆ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ತರಬೇತಿ ಪಡೆಯುವ 6ನೇ ತಂಡ ಉದ್ಘಾಟಿಸಿ ಅವರು ಮಾತನಾಡಿದರು.

ದೇಸಿ ತರಬೇತಿಯ ರಾಜ್ಯ ನೋಡಲ್ ಅಧಿಕಾರಿ ಬಿ. ಕಲ್ಪನಾ ಮಾತನಾಡಿ, ‘ದೇಶದಲ್ಲಿ ಈಗಾಗಲೇ 2.80 ಲಕ್ಷ ಜನರು ದೇಸಿ ಕೋರ್ಸ್‌ಗೆ ನೋಂದಣಿ ಮಾಡಿದ್ದು 80 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಮಾಣ ಪತ್ರ ಪಡೆದಿದ್ದಾರೆ ಎಂದರು.

ಮೀನುಗಾರಿಕಾ ಕಾಲೇಜಿನ ಡೀನ್ ಆದ ಡಾ. ಆಂಜನೇಯಪ್ಪ ಎಚ್.ಎನ್. ಮಾತನಾಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ.ರಮೇಶ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಿ ರವೀಂದ್ರಗೌಡ ಪಾಟೀಲ ಇದ್ದರು. ಕೇಂದ್ರದ ವಿಜ್ಞಾನಿ  ಶಿವಕುಮಾರ್ ಆರ್ ಸ್ವಾಗತಿಸಿದರು. ವಿಜ್ಞಾನಿ ಮಲ್ಲಿಕಾರ್ಜುನ ಎಲ್. ವಂದಿಸಿದರು. ವಿಜಿತ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 40 ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT