ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿನ್ನಿಗೋಳಿ: ಬಂಟ ಮನೆತನದವರಿಗೆ ಕ್ರೈಸ್ತರಿಂದ ಸನ್ಮಾನ

Published 30 ನವೆಂಬರ್ 2023, 14:30 IST
Last Updated 30 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಮೂಲ್ಕಿ: ಕಿನ್ನಿಗೋಳಿ ಬಳಿಯ ದಾಮಸ್ ಕಟ್ಟೆ ಕಿರೆಂ ರೆಮೆದಿ ಅಮ್ಮನವರ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳ ಬಾವ ತಾಳಿಪಾಡಿಗುತ್ತು, ಏಳಿಂಜೆ ಅಂಗಡಿಗುತ್ತಿನವರಿಗೆ ಅಡಿಕೆ, ವೀಳ್ಯದೆಲೆ ಹಾಗೂ ಬಾಳೆಗೊನೆ ನೀಡಲಾಯಿತು.

1784ರಲ್ಲಿ ಟಿಪ್ಪು ಸುಲ್ತಾನ್ ಕರಾವಳಿಯ ಕೆಲವು ಕ್ರೈಸ್ತರ ಹಾಗೂ ದೇವಾಲಯಗಳ ಮೇಲೆ ದಾಳಿ ನಡೆಸಿದ ಸಂದರ್ಭ ದಾಮಸ್ ಕಟ್ಟೆ ಕಿರೆಂ ರೆಮೆದಿ ಅಮ್ಮನವರ ದೇವಾಲಯದ ಕಡೆ ದಾಳಿ ನಡೆಸಲು ಬಂದಾಗ ಸ್ಧಳೀಯ ಮೂರು ಬಂಟ ಮನೆತನದವರು ದೇವಾಲಯವನ್ನು ರಕ್ಷಿಸಿದ್ದರು.

ಅದರ ಪ್ರತೀಕವಾಗಿ ಐಕಳಬಾವ, ತಾಳಿಪಾಡಿಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಮನೆತನದವರಿಗೆ ಸಂಪ್ರದಾಯದಂತೆ ಪ್ರತಿ ವರ್ಷ ವಾರ್ಷಿಕ ಹಬ್ಬದಂದು ಅಡಿಕೆ, ವೀಳ್ಯದೆಲೆ ಹಾಗೂ ಬಾಳೆಗೊನೆ ನೀಡಿ ಗೌರವಿಸಲಾಗುತ್ತಿದೆ.

ಐಕಳ ಬಾವ ಸುಕುಮಾರ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಜಯಪಾಲ ಶೆಟ್ಟಿ ತಾಳಿಪಾಡಿಗುತ್ತು, ದಿನೇಶ್ ಭಂಡ್ರಿಯಾಲ್ ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭುಶೆಟ್ಟಿ ಗೌರವ ಸ್ವೀಕರಿಸಿದರು.

ಧರ್ಮಗುರು ಓಸ್ವಲ್ಡ್ ಮೊಂತೆರೊ, ರೋಹನ್ ಡಿಕೋಸ್ತ, ಜೇಮ್ಸ್ ಲೋಬೊ, ಪೌಲ್ ಮಿರಾಂದ, ಮಾಕ್ಸಿಮ್ ಪಿಂಟೊ, ವಿಲ್ಫ್ರೆಡ್ ಮೋನಿಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT