ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಜಪೆ | ಜ.19ರಿಂದ ಗುತ್ತುದ ವರ್ಷೊದ ಪರ್ಬೊ

Published 16 ಜನವರಿ 2024, 4:45 IST
Last Updated 16 ಜನವರಿ 2024, 4:45 IST
ಅಕ್ಷರ ಗಾತ್ರ

ಬಜಪೆ: ಗುರುಪುರ ಗೋಳಿದಡಿಗುತ್ತಿನ ‘ಗುತ್ತುದ ವರ್ಸೊದ ಪರ್ಬೊ’ ಜ.19ರಿಂದ 21ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಜ.19ರಂದು ವೈದ್ಯನಾಥೇಶ್ವರ ಪಂಚದೇವತೆಗಳ ಆರಾಧನೆ, ಗಣಹೋಮ, ಸಂಜೆ 7ರಿಂದ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಮೇಳ ದವರಿಂದ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

ಜ.20ರಂದು ವೈದ್ಯನಾಥೇಶ್ವರ ಪಂಚ ದೇವತೆಗಳ ಆರಾಧನೆ, ಸಂಜೆ 6ಕ್ಕೆ ಕೆ.ಎಸ್.ನಿತ್ಯಾನಂದ ಗುರುಗಳ ಸಾನ್ನಿಧ್ಯದಲ್ಲಿ ‘ಗುತ್ತಿನ ವರ್ಷದ ಒಡ್ಡೋಲಗ’ ನಡೆಯ ಲಿದೆ. ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪ್ರಾಧ್ಯಾಪಕ ಬಿ.ವಿ.ಕುಮಾರಸ್ವಾಮಿ ಮೈಸೂರು ದೀಪ ಬೆಳಗಿಸಲಿದ್ದಾರೆ.

ತಿಂಗಳೆಬೀಡಿನ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೆಳ್ಳಿಬೆಟ್ಟುಗುತ್ತು ಸತೀಶ್ ಕಾವ, ಯಾದವ ಕೋಟ್ಯಾನ್ ಪೆರ್ಮುದೆ, ಉಪನ್ಯಾಸಕಿ ಅರ್ಪಿತಾ ಎಸ್.ಶೆಟ್ಟಿ ಉದ್ಯಾವರ ಭಾಗವಹಿಸುವರು. ಜ.20 ಮತ್ತು 21ರಂದು ಸಂಜೆ 6ರಿಂದ 8 ಗಂಟೆಯವರೆಗೆ ವಿವಿಧ ಸ್ಪರ್ಧೆ, ರಾತ್ರಿ 8ರಿಂದ ಭರತನಾಟ್ಯ ನಡೆಯಲಿದೆ.

ಜ.21ರಂದು ದೀಪೋತ್ಸವ, ತಾಲೀಮು ಬಳಗದಿಂದ ತಾಲೀಮು ಪ್ರದರ್ಶನ, ರಸಮಂಜರಿ ನಡೆಯಲಿದೆ. ಮಧ್ಯಾಹ್ನ 1.30ರಿಂದ 3.30ರವರೆಗೆ ಭಜನೆ, ಊಟೋಪಚಾರ ನಡೆಯಲಿದೆ ಎಂದು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT