ಮಣ್ಣಿನ ಕ್ರೀಡೆಗಳಿಂದ ಆರೋಗ್ಯ ವೃದ್ಧಿ

7
ಪಟ್ಟೆಯಲ್ಲಿ ಮುಕ್ತ ಕೆಸರುಗದ್ದೆ ಕ್ರೀಡಾಕೂಟ

ಮಣ್ಣಿನ ಕ್ರೀಡೆಗಳಿಂದ ಆರೋಗ್ಯ ವೃದ್ಧಿ

Published:
Updated:
ಪುತ್ತೂರು ತಾಲ್ಲೂಕಿನ ಪಟ್ಟೆ ಶ್ರೀಕೃಷ್ಣ ಯುವಕಮಂಡಲದ ವತಿಯಿಂದ ನೆಹರೂ ಯುವಕೇಂದ್ರ ಮತ್ತು ತಾಲ್ಲೂಕು ಯುವಜನ ಒಕ್ಕೂಟದ ಸಹಕಾರದಲ್ಲಿ ಮಂಗಳವಾರ ಪಟ್ಟೆ ಕೆಸರುಗದ್ದೆಯಲ್ಲಿ ನಡೆದ ತೃತೀಯ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನುಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ನಾರಾಯಣ ಭಟ್ ಬೀರ್ನೋಡಿ ಉದ್ಘಾಟಿಸಿದರು.

ಪುತ್ತೂರು : ‘ಸಾಂಪ್ರದಾಯಿಕವಾಗಿ ನಡೆದು ಬಂದಿರುವ ಮಣ್ಣಿನ ಮಕ್ಕಳ ಕ್ರೀಡೆಗಳು ಆರೋಗ್ಯ ವೃದ್ಧಿಸುವ ವೈಜ್ಞಾನಿಕ ಮಹತ್ವ ಹೊಂದಿವೆ. ಈ ಕಾರಣದಿಂದಲೇ ನಮ್ಮ ಹಿರಿಯರು, ಶ್ರಮಿಕ ವರ್ಗ ದೈಹಿಕ ಕ್ಷಮತೆಯನ್ನು ಕಾಪಾಡಿಕೊಂಡು ಬಂದಿದ್ದರು’ ಎಂದು ಪಡುಮಲೆ ಕೋಟಿ -ಚೆನ್ನಯ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ಅವರು ಹೇಳಿದರು.

ಪುತ್ತೂರು ತಾಲ್ಲೂಕಿನ ಪಟ್ಟೆ ಶ್ರೀಕೃಷ್ಣ ಯುವಕಮಂಡಲದ ವತಿಯಿಂದ ನೆಹರೂ ಯುವಕೇಂದ್ರ ಮತ್ತು ತಾಲ್ಲೂಕು ಯುವಜನ ಒಕ್ಕೂಟದ ಸಹಕಾರದಲ್ಲಿ ಮಂಗಳವಾರ ಪಟ್ಟೆ ಕೆಸರುಗದ್ದೆಯಲ್ಲಿ ನಡೆದ ತೃತೀಯ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟ ಹಾಗೂ ವನ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ನಾರಾಯಣ ಭಟ್ ಬೀರ್ನೋಡಿ  ಉದ್ಘಾಟಿಸಿದರು. ನೆಹರೂ ಯುವ ಕೇಂದ್ರದ ಪುತ್ತೂರು ತಾಲ್ಲೂಕು ಸಂಯೋಜಕಿ ಗುರುಪ್ರಿಯಾ ನಾಯಕ್ , ಬಡಗನ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಲತಾ ಸಂಪಿಗೆಮಜಲು, ಬಾಲಕೃಷ್ಣ ಮೋಡಿಕೆ, ದಾಮೋದರ ಆಚಾರ್ಯ ಅವರು ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶ್ರೀಕೃಷ್ಣ ಯುವಕಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ಇದ್ದರು.

ಶ್ರೀಕೃಷ್ಣ ಯುವಕಮಂಡಲದ ಕಾರ್ಯದರ್ಶಿ ಚಂದ್ರಶೇಖರ ಉಳಯ ಸ್ವಾಗತಿಸಿದರು, ಸದಸ್ಯ ಪ್ರೀತಂ ವಂದಿಸಿದರು. ಸ್ಥಾಪಕಾಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ಹಾಗೂ ಮಾಜಿ ಅಧ್ಯಕ್ಷ ಬಾಲಚಂದ್ರ ಪಟ್ಟೆ ನಿರೂಪಿಸಿದರು.

ಸಮಾರೋಪ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಗುರುಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ವೈ.ಕೆ. ನಾಯ್ಕ್, ನಿವೃತ್ತ ಸೈನಿಕ ಸುಬ್ಬಪ್ಪ ಪಾಟಾಳಿ ಪಟ್ಟೆ, ಯುವ ಉದ್ಯಮಿ ಜನಾರ್ದನ ಪದಡ್ಕ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ರೇಖಾ ನಾಗರಾಜ್, ಪ್ರಗತಿಪರ ಕೃಷಿಕ ಪ್ರವೀಣ್ ಶರವು, ಬಿಜೆಪಿ ವಕ್ತಾರ ಆರ್.ಸಿ. ನಾರಾಯಣ, ಕ್ರೀಡಾಕೂಟದ ಸ್ಥಳ ದಾನಿಗಳಾದ ಅಂಗಾರ ಪಟ್ಟೆ ಮತ್ತು ಕೃಷ್ಣ ಪಾಟಾಳಿ ಇದ್ದರು. 

ಗ್ರಾಮೀಣ ಭಾಗದಲ್ಲಿ ಇಂದೂ ಕೂಡ ಭಾರತೀಯ ಸಂಸ್ಕೃತಿ, ಕೃಷಿ ಜೀವನ ಉಳಿದುಕೊಂಡಿದೆ. ಆದರೆ ಯುವ ಸಮುದಾಯಕ್ಕೆ ಇಂತಹ ಸುಂದರ ಜೀವನ ಕ್ರಮಗಳ ಕುರಿತು ಅರಿವು ಮೂಡಿಸುವ ಮತ್ತು ಪ್ರೇರೇಪಿಸುವ ಕೆಲಸಗಳು ಯುವ ಸಂಘಟನೆಗಳ ಮೂಲಕ ನಡೆಯಬೇಕು.‌
ಸಂಜೀವ ಮಠಂದೂರು, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !