ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮಂಗಳೂರು ಮಂಡಲ ಕಾರ್ಯಾಲಯ ಉದ್ಘಾಟನೆ

Published 28 ಮಾರ್ಚ್ 2024, 14:11 IST
Last Updated 28 ಮಾರ್ಚ್ 2024, 14:11 IST
ಅಕ್ಷರ ಗಾತ್ರ

ಉಳ್ಳಾಲ: ಮೋದಿ ಸರ್ಕಾರ ₹ 1,13,000 ಕೋಟಿ ಅನುದಾನ ಜಿಲ್ಲೆಯ ಅಭಿವೃದ್ಧಿಗೆ 10 ವರ್ಷಗಳಲ್ಲಿ ನೀಡಿದೆ. ₹ 3000 ಕೋಟಿ ಮಂಗಳೂರು ಕ್ಷೇತ್ರಕ್ಕೆ ಬಂದಿದೆ. ಅಭಿವೃದ್ಧಿ ವಿಷಯದಲ್ಲಿ ನನ್ನ ಹೆಸರು ಹೇಳುವುದು ಬೇಡ, ಮೋದಿ ಹೆಸರು ಹೇಳಿಕೊಂಡು ಪ್ರಚಾರ ಮಾಡಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ತೊಕ್ಕೊಟ್ಟು ಕಲ್ಲಾಪುವಿನ ಶ್ರೀ ಕೋರ್ದಬ್ಬು ದೈವಸ್ಥಾನ ಬಳಿಯ ಕಟ್ಟಡಲದಲ್ಲಿ ಲೋಕಸಭಾ ಚುನಾವಣಾ ಮಂಗಳೂರು ಮಂಡಲ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ಮಾಡಿದ ಕೆಲಸಕ್ಕಿಂತ 10 ಪಟ್ಟು ಪ್ರಚಾರ ಪಡೆದುಕೊಳ್ಳುವರು. ಕ್ಷೇತ್ರದಲ್ಲಿ ಖಾದರ್ ಫೊಟೊ ಹಾಕಿದ್ದರೂ ಅದರ ಹಿಂದೆ ಇರುವುದು ಕೇಂದ್ರ ಸರ್ಕಾರದ ಹಣ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ತೊಕ್ಕೊಟ್ಟುವಿನಲ್ಲಿ ಮಂಗಳೂರು ಮಂಡಲ ಬಿಜೆಪಿ ಕಚೇರಿಗೆ ಶಾಶ್ವತ ಕಟ್ಟಡ ನಿರ್ಮಿಸುವ ಉದ್ದೇಶವಿದೆ ಎಂದರು.

ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಕ್ಷೇತ್ರ ಉಸ್ತುವಾರಿ ರಾಧಾಕೃಷ್ಣ ರೈ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಮಂಗಳೂರು ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ವಕ್ತಾರ ಮೋಹನರಾಜ್ ಕೆ.ಆರ್, ರಾಜ್ಯ ಮೀನುಗಾರ ಪ್ರಕೋಷ್ಠದ ಸಹಸಂಚಾಲಕ ಯಶವಂತ್ ಅಮೀನ್, ಸುಜಿತ್ ಮಾಡೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT