ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೆಗಳಿಂದ ವಿಕಾಸಗೊಂಡದ್ದೇ ವಿಜ್ಞಾನ: ಇಸ್ರೊ ವಿಜ್ಞಾನಿ ಎಂ.ವೆಂಕಟರತ್ನಮ್

Published 4 ಜನವರಿ 2024, 2:34 IST
Last Updated 4 ಜನವರಿ 2024, 2:34 IST
ಅಕ್ಷರ ಗಾತ್ರ

ಮೂಡುಬಿದಿರೆ: ಪ್ರತಿಯೊಬ್ಬ ವಿದ್ಯಾರ್ಥಿಯ ಯೋಚನೆ ಮತ್ತು ಗ್ರಹಿಸುವ ಕೌಶಲ ಆತನನ್ನು ಜ್ಞಾನದಾಹಿಯನ್ನಾಗಿ ಮಾಡುತ್ತದೆ. ನಿರಂತರ ಪ್ರಶ್ನಿಸುವ ಗುಣಗಳಿಂದ ಮನೋವಿಕಸನ ಸಾಧ್ಯ ಎಂದು ಇಸ್ರೊ ವಿಜ್ಞಾನಿ ಎಂ.ವೆಂಕಟರತ್ನಮ್ ಹೇಳಿದರು.

ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಒಂದು ಸಂಸ್ಥೆಯ ಶೈಕ್ಷಣಿಕ ಸಾಧನೆ ಆ ಶಿಕ್ಷಣ ಸಂಸ್ಥೆಯ ಬದ್ಧತೆಯನ್ನು ವಿವರಿಸುತ್ತದೆ. ಇಸ್ರೊ ವಿಜ್ಞಾನಿಯಾಗಿ ನಾವು ಚಂದ್ರಯಾನವನ್ನು ಸಂತೋಷಿಸಿದ್ದೆವು. ಆದರೆ, ಇಂದು ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ ಗಮನಿಸಿದಾಗ ಭಾರತದ ಭವಿಷ್ಯ ಉಜ್ವಲವಾಗಿದೆ ಎಂದು ಸಂತೋಷವಾಗುತ್ತಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಎಕ್ಸಲೆಂಟ್ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳಾದ ಸ್ವಾತಿ ಪಾಟೀಲ್, ಸುಪ್ರೀತ್ ವಿಷ್ಣು ಬರೆದ ಕಾದಂಬರಿಗಳಾದ ‘ಇಟ್ಸ್ ಆಲ್ ಫಾರ್ ಯೂ’ ಹಾಗೂ ‘ಹಿಡನ್ ಇಕೋ’ ಬಿಡುಗಡೆ ಮಾಡಲಾಯಿತು.

ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ವಿದ್ಯಾರ್ಥಿನಾಯಕ ನೀರಜ್, ಸ್ಫೂರ್ತಿ ಪಾಟೀಲ್ ಭಾಗವಹಿಸಿದ್ದರು.

ದಿವ್ಯಾಲಕ್ಷ್ಮೀ ರೈ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕಿಯರಾದ ಸೌಮ್ಯಾ ಮತ್ತು ಪ್ರಿಯಾಂಕ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT