ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ವಿಷ್ಣುಮೂರ್ತಿ ದೇವರಿಗೆ ಸ್ವರ್ಣ ಕಿರೀಟ ಸಮರ್ಪಣೆ

ಕಾಂಚನ-ನಡ್ಪ ದೇವಸ್ಥಾನದ ವರ್ಷಾವಧಿ ಜಾತ್ರೆ
Published 16 ಫೆಬ್ರುವರಿ 2024, 12:52 IST
Last Updated 16 ಫೆಬ್ರುವರಿ 2024, 12:52 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನ-ನಡ್ಪ ದೇವಸ್ಥಾನದ ವರ್ಷಾವಧಿ ಜಾತ್ರೆ, ವಿಷ್ಣುಮೂರ್ತಿ ದೇವರಿಗೆ ಸ್ವರ್ಣ ಕಿರೀಟ, ಬೆಳ್ಳಿಯ ಎದೆಕವಚ ಹಾಗೂ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಿಸಲಾಯಿತು.

ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ, ಬಜತ್ತೂರು ಗುತ್ತಿನ ನಾಗತಂಬಿಲ ನಡೆಯಿತು. ಕೊಡಮಣಿತ್ತಾಯ ಮತ್ತು ಶಿರಾಡಿ ದೈವಗಳ ಭಂಡಾರ ತರಲಾಯಿತು. ದೇವರಿಗೆ ರಂಗಪೂಜೆ, ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ ನಡೆಯಿತು. ದೇವರ ಬಲಿ ಹೊರಟು ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತಕಟ್ಟೆಪೂಜೆ ಬಳಿಕ ದೇವರ ನೃತ್ಯ ಬಲಿ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಗುರುವಾರ ಗಣಪತಿ ಹೋಮ, ಕಲಶಾಭಿಷೇಕ, ಅಪ್ಪಸೇವೆ ನಡೆಯಿತು. ದೇವರ ದರ್ಶನ ಬಲಿ ಉತ್ಸವ, ಬಟ್ಟಲುಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ, ಭಂಡಾರ ತೆಗೆಯುವುದು, ದೇವರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು, ರಾತ್ರಿ ದೈವಗಳ ನೇಮೋತ್ಸವ ನಡೆಯಿತು.

ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು.

ದೇವಸ್ಥಾನದ ಅರ್ಚಕ, ಮೊಕ್ತೇಸರ ನಾರಾಯಣ ಬಡೆಕ್ಕಿಲ್ಲಾಯ ಪೂಜಾ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಕಾಂಚನ ರೋಹಿಣಿ ಸುಬ್ಬರತ್ನಂ, ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ಪದಾಧಿಕಾರಿಗಳಾದ ಶಿವರಾಮ ಕಾರಂತ ಉರಾಬೆ, ಸುಧಾಕೃಷ್ಣ ಪಿ.ಎನ್., ಕುಶಾಲಪ್ಪ ಗೌಡ ಬಜತ್ತೂರು ಗುತ್ತು, ಜಗದೀಶ ರಾವ್ ಮಣಿಕ್ಕಳ, ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಕೆ.ವಿ.ಕಾರಂತ, ಲೋಕೇಶ್ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲಾಯ, ಯುವ ಟ್ರಷ್ಟ್‌ನ ಸುರೇಶ್ ಬಿದಿರಾಡಿ, ಯಾದವ ನೆಕ್ಕರೆ, ದಿನೇಶ್ ನಡ್ಪ, ಪ್ರಸನ್ನ ಕಾರಂತ, ನೋಣಯ್ಯ ಪದಕ, ಶಿವರಾಮಪ್ರಸಾದ್ ಬಜತ್ತೂರು, ಎಲ್ಯಣ್ಣ ಗೌಡ ಶಿವಪುರ, ಕಿಶೋರ್ ಬಜತ್ತೂರು, ವಿಷ್ಣುಮೂರ್ತಿ ಭಜನಾ ಸಂಘದ ಅಧ್ಯಕ್ಷ ಉಮೇಶ್ ಗೌಡ ನೆಕ್ಕರೆ, ಕಾರ್ಯದರ್ಶಿ ಕೇಶವ ಗೌಡ ಅಗರ್ತ, ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT