ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್ ಅಂತರ ವಲಯ ಕ್ರಿಕೆಟ್‌ ಆರಂಭ

Published 27 ಜನವರಿ 2024, 14:27 IST
Last Updated 27 ಜನವರಿ 2024, 14:27 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಆಯೋಜಿಸಿರುವ ‘ಕೆಬಿಎಲ್ ಸೆಂಟಿನರಿ ಕಪ್’ ಅಂತರ ವಲಯ ಕ್ರಿಕೆಟ್ ಟೂರ್ನಿಗೆ ನಗರ ಹೊರವಲಯದ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಬಲೂನ್‌ಗಳನ್ನು ಹಾರಿಸಿ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ರಾಜ, ಬ್ಯಾಂಕಿಂಗ್ ಕ್ಷೇತ್ರದಲ್ಲಿ 100 ವರ್ಷ ಸೇವೆ ಸಲ್ಲಿಸಿದ ಕರ್ಣಾಟಕ ಬ್ಯಾಂಕ್ ಗೆಲುವಿನ ಟ್ರೋಫಿ ಎತ್ತಿ ಆಗಿದೆ. ಟೂರ್ನಿಯಲ್ಲಿ ಯಾವ ತಂಡ ಗೆದ್ದರೂ ಅದನ್ನು ಬ್ಯಾಂಕ್‌ನ ಗೆಲುವು ಎಂದೇ ಪರಿಗಣಿಸಬೇಕು ಎಂದರು.

ಉತ್ತಮ ಆರೋಗ್ಯ ಮತ್ತು ದೈಹಿಕ ಕ್ಷಮತೆ ಇರುವವರು ಕೆಲಸ ನಿರ್ವಹಣೆಯಲ್ಲೂ ಹೆಚ್ಚು ಸಾಮರ್ಥ್ಯ ತೋರಬಲ್ಲರು. ಅದು ಉತ್ಪಾದಕತೆ ಹೆಚ್ಚಲು ನೆರವಾಗುತ್ತದೆ. ಇದಕ್ಕೆ ಕ್ರೀಡೆ ಅಗತ್ಯ ಎಂದ ಅವರು ಕರ್ಣಾಟಕ ಬ್ಯಾಂಕ್ ಉತ್ತಮ ಕ್ರೀಡಾಪಟುಗಳನ್ನು ಬೆಳೆಸಲು ಪ್ರಯತ್ನಿಸುತ್ತಿದೆ ಎಂದರು.

ಮಂಗಳೂರು ವಾರಿಯರ್ಸ್‌, ಮಂಗಳೂರು ಸ್ಪಾರ್ಟನ್ಸ್, ಮೈಸೂರು ಮಹಾರಾಜಾಸ್, ಹುಬ್ಬಳ್ಳಿ ಹೀರೋಸ್, ಬೆಂಗಳೂರು ಗ್ಲ್ಯಾಡಿಯೇಟರ್ಸ್, ಬೆಂಗಳೂರು ಲಯನ್ಸ್, ಶಿವಮೊಗ್ಗ ಸೂಪರ್ ಸ್ಟ್ರೈಕರ್ಸ್‌, ಕಲಬುರಗಿ ನೈಟ್ಸ್, ಉಡುಪಿ ಫೈಟರ್ಸ್, ತುಮಕೂರು ವಾರಿಯರ್ಸ್‌, ಅಹ್ಮದಾಬಾದ್ ಏಸಸ್, ಮುಂಬೈ ಸ್ಟಾರ್ಸ್‌, ಡೆಲ್ಲಿ ಸ್ಪಾರ್ಟನ್ಸ್, ಚೆನ್ನೈ ಚಾಂಪಿಯನ್ಸ್, ಕೋಲ್ಕತ್ತ ನೈಟ್‌ ರೈಡರ್ಸ್, ಹೈದರಾಬಾದ್ ಟೈಟನ್ಸ್ ತಂಡಗಳು ಭಾಗವಹಿಸಿವೆ.

ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ನಿರ್ಮಲ್ ಕುಮಾರ್, ಸಾಂಡ್ರಾ ಮರಿಯಾ ಲೊರೆನಾ, ಉಪ ಪ್ರಧಾನ ವ್ಯವಸ್ಥಾಪಕರಾದ ಗೋಪಾಲಕೃಷ್ಣ ಸಾಮಗ, ರಘುರಾಮ ಎಚ್.ಎಸ್, ವಸಂತ ಹೇರ್ಲೆ, ಅರುಲ್ ರಾಜ್ ಗೋಮ್ಸ್, ಶರತ್‌ಚಂದ್ರ ಹೊಳ್ಳ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಜೇನ್ ಸಲ್ಡಾನ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಸ್.ಸುರೇಶ್ ಹೆಗ್ಡೆ, ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ.ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT