ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕತಾರ್  ಕರ್ನಾಟಕ ಸಂಘದ ಆಡಳಿತ ಮಂಡಳಿ ಆಯ್ಕೆ

Published 8 ಜೂನ್ 2024, 12:57 IST
Last Updated 8 ಜೂನ್ 2024, 12:57 IST
ಅಕ್ಷರ ಗಾತ್ರ

ಮಂಗಳೂರು: ಕತಾರ್‌ನ ಕರ್ನಾಟಕ ಸಂಘದ 2024–25ನೇ ಸಾಲಿನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ.

ಸಂಘದ ಅಧ್ಯಕ್ಷರನ್ನಾಗಿ ಮೂಡಂಬೈಲು ರವಿ ಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ರವಿ ಶೆಟ್ಟಿ ಅವರು ಮಂಗಳೂರಿನವರು. 

ರಮೇಶ ಕೆ.ಎಸ್ (ಉಪಾಧ್ಯಕ್ಷ), ಕುಮಾರಸ್ವಾಮಿ (ಪ್ರಧಾನ ಕಾರ್ಯದರ್ಶಿ), ಪ್ರದೀಪ್ ಕುಮಾರ್ ದಿಲೀಪ್ (ಖಜಾಂಚಿ), ದಿನೇಶ್ ಗೌಡ (ಸಾರ್ವಜನಿಕ ಸಂಪರ್ಕ ಹಾಗೂ ಸಮಾಜ ಹಿತೈಷಿ ಕಾರ್ಯದರ್ಶಿ), ಸೌಮ್ಯ ಕೆ.ಟಿ. (ಸಾಂಸ್ಕೃತಿಕ ಕಾರ್ಯದರ್ಶಿ), ಭುವನ ಸೂರಜ್ (ಮಹಿಳಾ ಮತ್ತು ಮಕ್ಕಳ ವಿಭಾಗದ ಕಾರ್ಯದರ್ಶಿ), ಭೀಮಪ್ಪ ಖೋತ (ಕನ್ನಡ ಅಭಿವೃದ್ಧಿ ಕಾರ್ಯದರ್ಶಿ), ಸರ್ಫರಾಜ್‌ ಜಾಫರ್ ತಾಂಬಿಟ್ಕರ್ (ಕ್ರೀಡಾ ಕಾರ್ಯದರ್ಶಿ), ಎಲ್.ಜಿ. ಪಾಟೀಲ (ಜಂಟಿ ಕಾರ್ಯದರ್ಶಿ), ಶಶಿಧರ ಎಚ್.ಬಿ (ಪರಿಸರ ಹಾಗೂ ವ್ಯವಸ್ಥಾಪಕ ಕಾರ್ಯದರ್ಶಿ), ಶ್ರೀಧರ ಚಂದ್ರ (ಮಾಧ್ಯಮ ಹಾಗೂ ಸದಸ್ಯತ್ವ ಸಂಚಾಲಕ),  ಭಾವನಾ ನವೀನ್ (ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ) ಹಾಗೂ ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಗೌಡ ಅವರನ್ನು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಂಘ 25ನೇ ವರ್ಷಕ್ಕೆ ಕಾಲಿಡುತ್ತಿದ್ದು, ಬೆಳ್ಳಿ ಹಬ್ಬ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ನೂತನ ಆಡಳಿತ ಮಂಡಳಿಯು, ಪರಿಸರ ಸಂರಕ್ಷಣೆ, ರಕ್ತ ದಾನ ಶಿಬಿರ, ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ, ಕನ್ನಡ ರಾಜ್ಯೋತ್ಸವ, ವಿವಿಧ ಕ್ರೀಡಾ ಸ್ಪರ್ಧೆ, ಹಬ್ಬಗಳ ಆಚರಣೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವೈದ್ಯಕೀಯ ಶಿಬಿರ, ಕವಿಗೋಷ್ಠಿ ಹೀಗೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲು ತಯಾರಿ ನಡೆಸಿದೆ.

ಸಲಹಾ ಸಮಿತಿಯ ಸದಸ್ಯರಾದ ವಿ.ಎಸ್. ಮನ್ನಂಗಿ, ಅರುಣ್ ಕುಮಾರ್, ದೀಪಕ್ ಶೆಟ್ಟಿ, ಡಾ.ಸಂಜಯ ಕುದರಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಅವರು ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT