ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ: ಬ್ರಹ್ಮಕಲಶೋತ್ಸವ ವಾರ್ಷಿಕ ದಿನ ಆಚರಣೆ

Published 25 ಫೆಬ್ರುವರಿ 2024, 14:31 IST
Last Updated 25 ಫೆಬ್ರುವರಿ 2024, 14:31 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಾರ್ಷಿಕ ದಿನದ ಅಂಗವಾಗಿ ಶನಿವಾರ 108 ಸಿಯಾಳ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ರಾತ್ರಿ ದೇವಳದಲ್ಲಿ ದೇವರ ಉತ್ಸವ, ಕಾಶಿಕಟ್ಟೆವರೆಗೆ ದೇವರ ಚಿಕ್ಕ ರಥೋತ್ಸವ (ಪಂಚಮಿ) ನಡೆಯಿತು. ಕ್ಷೇತ್ರದ ಪ್ರಭಾರ ತಂತ್ರಿ ಸೀತಾರಾಮ ಎಡಪಡಿತ್ತಾಯ  ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು  ನಡೆದವು.

ಬ್ರಹ್ಮಕಲಶೋತ್ಸವ ದಿನದ ಅಂಗವಾಗಿ ಕ್ಷೇತ್ರಕ್ಕೆ ಭಕ್ತರೊಬ್ಬರು ₹5 ಲಕ್ಷ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT