ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಟುಂಬಶ್ರೀ ಕಲೋತ್ಸವ ಇಂದಿನಿಂದ

Published 17 ಮೇ 2024, 22:38 IST
Last Updated 17 ಮೇ 2024, 22:38 IST
ಅಕ್ಷರ ಗಾತ್ರ

ಬದಿಯಡ್ಕ: ಮಂಜೇಶ್ವರ ತಾಲ್ಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವವು ಮೇ 18ರಿಂದ 2 ದಿನ ಪೆರ್ಲದ ಭಾರತೀ ಸದನದಲ್ಲಿ ನಡೆಯಲಿದೆ.

ಮೇ 18ರಂದು ಬೆಳಿಗ್ಗೆ 9.30ರಿಂದ ವಿವಿಧ ಸ್ಪರ್ಧೆಗಳು ನಡೆಯಲಿವೆ. 19ರಂದು ಬೆಳಿಗ್ಗೆ 9.30ಕ್ಕೆ ಪೆರ್ಲ ಪೇಟೆಯಿಂದ ಮೆರವಣಿಗೆ, 10ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಡೆಯುವ ಸಮಾರೋಪದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಮಂಜೇಶ್ವರ ತಾಲ್ಲೂಕಿನ 8 ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್‌ನ ಸುಮಾರು 500 ಮಂದಿ ಸ್ಪರ್ಧಿಗಳು ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT