ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂಆರ್‌ಪಿಎಲ್: 120 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ಸಾವು

Published 28 ಮೇ 2024, 14:28 IST
Last Updated 28 ಮೇ 2024, 14:28 IST
ಅಕ್ಷರ ಗಾತ್ರ

ಸುರತ್ಕಲ್: ಎಂಆರ್‌ಪಿಎಲ್‌ನ ಹೈಡ್ರೋಜನ್ ಘಟಕದ ನೀರಿನ ಸೋರಿಕೆ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು 120 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಜಾರ್ಖಾಂಡ್‌ನ ರಾಂಚಿ ಜಿಲ್ಲೆಯ ಮಂಗಳ್ ಓರನ್ (38) ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದರು.

ಹೈಡ್ರೋಜನ್ ಘಟಕದ ಸುಮಾರು 120 ಅಡಿ ಎತ್ತರದಲ್ಲಿರುವ ಹೈಡೋಕ್ಯಾಕರ್‌ನಲ್ಲಿ ನೀರಿನ ವೇಗ ಪರಿಶೀಲಿಸಲು ಮಂಗಳ ಓರನ್ ತೆರಳಿದ್ದರು. ಆಗ ಅಲ್ಲಿ ನೀರಿನ ಸೋರಿಕೆ ಕಂಡು ಬಂದಿತ್ತು. ಅದನ್ನು ಸರಿಪಡಿಸುವ ಸಂದರ್ಭ ಸೋರುವಿಕೆಯಲ್ಲಿ ನೀರಿನ ಹರಿವು ಒಮ್ಮೆಲೇ ಹೆಚ್ಚಾಗಿ ಮಂಗಳ್ ಓರನ್ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಅಲ್ಲಿನ ಸಿಬ್ಬಂದಿ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ.

ಕಂಪನಿ ನಿರ್ಲಕ್ಷ್ಯವೇ ಕಾರಣ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಂಗಳ್ ಓರನ್ ಅವರನ್ನು ಕಂಪನಿ ಅಧಿಕಾರಿಗಳು ಸುರಕ್ಷತಾ ಸಾಧನಗಳಿಲ್ಲದೆ 120 ಅಡಿ ಮೇಲಕ್ಕೆ ಹತ್ತಿಸಿದ್ದರಿಂದ ಅವಘಡ ನಡೆದಿದೆ ಎಂದು ಕಾರ್ಮಿಕರ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT